Political News
suddibindu.in
SIRSI: ಶಿರಸಿ: ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ಶೀಘ್ರದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಶಿವರಾಮ ಹೆಬ್ಬಾರ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆನ್ನಲಾಗಿದೆ.
ಶಿರಸಿ ನಗರದ ಕೆಡಿಸಿಸಿ ಬ್ಯಾಂಕ್ ಅಥಿತಿ ಗ್ರಹದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ತಮ್ಮ ಬೆಂಬಲಿಗರೊಂದಿಗೆ ಕೆಲ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಂಜಲಿ ನಿಂಬಾಳ್ಕರ್ ಅವರಿಗೆ ಬೆಂಬಲ ನೀಡುವ ಹಾಗೂ ಪುತ್ರ ವಿವೇಕ ಹೆಬ್ಬಾರ್ ಅವರನ್ನ ಕಾಂಗ್ರೆಸ್ಗೆ ಸೇರ್ಪಡೆ ಮಾಡುವ ಕುರಿತಾಗಿ ಸಭೆಯಲ್ಲ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ
- ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?
- ಹೊನ್ನಾವರದ ಖಾಸಗಿ ಬಸ್ ಚಾಲಕನ ರಾಸಲೀಲೆ : ಇನ್ಸ್ಟಾದಲ್ಲಿ ಪೊಟೋ ಅಪ್ಲೋಡ್..!
- ಮಹಿಳೆಯ ಕಣ್ಣೀರಿಗೆ ನ್ಯಾಯ : ವಿಕೃತ ಕಾಮಿ ಉಲ್ಲಾಸಗೆ 10ವರ್ಷ ಜೈಲು ಶಿಕ್ಷೆ
ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ಗೆ ಬೆಂಬಲಿಸುವ ಬಗ್ಗೆ ಹಾಗೂ ವಿವೇಕ ಹೆಬ್ಬಾರ್ ಅವರನ್ನ ಕಾಂಗ್ರೆಸ್ ಸೇರ್ಪಡೆ ಒಮ್ಮತದಿಂದ ಬೆಂಬಲ ಸೂಚಿಸಿದ್ದಾರೆನ್ನಲಾಗಿದೆ. ಸಭೆಯಲ್ಲಿ ವಿವೇಕ ಹೆಬ್ಬಾರ್,ಮುಖಂಡರಾದ ದ್ಯಾವಣ್ಣ ದೊಡ್ಮನಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡಿದ್ದರು,





