Suddibindu.in
Honnavr: ಹೊನ್ನಾವರ : ಕೆಎಸ್ಆರ್ಟಿಸಿ ಬಸ್(KSRTC bus) ಹಾಗೂ ಎಕ್ಟಿವಾ ಹೊಂಡಾ (Activa Honda,) ದ್ವಿಚಕ್ರವಾಹನದ ನಡುವೆ ಭೀಕರ ಅಪಘಾತ ಸಂಭಂಧಿಸಿ ತಾಯಿ,ಮಗಳಿಬ್ಬರೂ ಬಸ್ ಚಕ್ರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಕಿಯ ಗುಳದಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಸವಿತಾ ಆಚಾರಿ (40), ಅಂಕಿತಾ (17) ಅಪಘಾತದಲ್ಲಿ ಮೃತಪಟ್ಟಿರುವ ತಾಯಿ ಮಗಳಾಗಿದ್ದಾರೆ. ಇವರು ಎಕ್ಟಿವಾ ಹೊಂಡಾ ದ್ವಿಚಕ್ರವಾಹನದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಡಿಕ್ಕಿ ಹೊದೆದಿದೆ. ಅಪಘಾತದ ಭೀಕರತೆಗೆ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ :-
- ಹೊಂಡೆ ಉತ್ಸವದಲ್ಲಿ ಬಿಜೆಪಿ ರಾಜ್ಯ ಉಪಾದ್ಯಕ್ಷೆ ರೂಪಾಲಿ ನಾಯ್ಕ್ ಕುಟುಂಬಸ್ಥರೊಂದಿಗೆ ಬಾಗಿ
- ಹೊಂಡೆ ಉತ್ಸವದಲ್ಲಿ ಗಮನ ಸೆಳೆದ “ಕಾಂತಾರ ಚಾಪ್ಟರ್ 1″ ದೃಶ್ಯ
- ಅಂಕೋಲಾದಲ್ಲಿ ಹಿಂಡಲಕಾಯಿಯಿಂದ ಹೊಡೆದಾಟ !
ಕೆಎಸ್ಆರ್ಟಿಸಿ ಬಸ್ ಮಂಗಳೂರು(Mangalore) ಕಡೆಯಿಂದ ಬೆಳಗಾವಿಗೆ ಚಲಿಸುತ್ತಿದ್ದು,ಈ ವೇಳೆ ಎಕ್ಟಿವಾ ಹೊಂಡಾ ದ್ವಿಚಕ್ರವಾಹನ ಸವಾರರನ್ನ ತಪ್ಪಿಸಲು ಹೋದ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.ಇನ್ನೂ ಅಪಘಾತವಾಗಿರುವ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
