
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕರಾವಳಿ ಉತ್ಸವದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.
ಇಂದಿನಿಂದ ಐದು ದಿನಗಳ ಕಾಲ ಈ ವಿಶೇಷ ಹೆಲಿಕ್ಯಾಪ್ಟರ್ ಸೇವೆ ಲಭ್ಯವಿರಲಿದೆ.ಹೆಲಿಕ್ಯಾಪ್ಟರ್ ರೈಡ್ ಕಾರ್ಯಕ್ರಮಕ್ಕೆ ಕಿವುಡ ಹಾಗೂ ಮೂಕ ಮಕ್ಕಳಿಂದ ಉದ್ಘಾಟನೆ ನೆರವೇರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಅರ್ಥ ನೀಡಿದೆ. ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಉಚಿತ ಹೆಲಿಕ್ಯಾಪ್ಟರ್ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಶಾಸಕರಾದ ಸತೀಶ್ ಸೈಲ್ ಅವರ ಪುತ್ರಿ ಸಾಚಿ ಅವರ ಸಹಕಾರದಿಂದ ಈ ಉಚಿತ ವ್ಯವಸ್ಥೆ ಮಾಡಲಾಗಿದೆ.
ಹೆಲಿಕ್ಯಾಪ್ಟರ್ ರೈಡ್ ವೇಳೆ ಅರಬ್ಬಿ ಸಮುದ್ರದ ಸುಂದರ ಕಡಲ ತೀರ, ಕಾಳಿ ನದಿಯ ಸಂಗಮ ಪ್ರದೇಶ ಹಾಗೂ ಕಾರವಾರ ನಗರದ ಮನಮೋಹಕ ದೃಶ್ಯಾವಳಿಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಸುಮಾರು 7 ನಿಮಿಷಗಳ ಈ ರೈಡ್‌ಗೆ ಒಬ್ಬರಿಗೆ3,900 ದರ ನಿಗದಿಪಡಿಸಲಾಗಿದೆ.
ಕಾರ್ಯಕ್ರಮದ ವಿಶೇಷ ಕ್ಷಣವಾಗಿ, ಪೌರ ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣ ಮಾಡಿ, ಸಮಾಜದ ಎಲ್ಲಾ ವರ್ಗಗಳೊಂದಿಗೆ ಒಂದಾಗಿ ಉತ್ಸವವನ್ನು ಆಚರಿಸುವ ಸಂದೇಶ ನೀಡಿದರು.
ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾದ ಈ ಹೆಲಿಕ್ಯಾಪ್ಟರ್ ರೈಡ್ ಸಾರ್ವಜನಿಕರಲ್ಲಿ ಅಪಾರ ಉತ್ಸಾಹ ಮೂಡಿಸಿದ್ದು, ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ/ಮಂಕಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಸ್ಪಷ್ಟ ಬಹುಮತ, 20 ಸ್ಥಾನಗಳಲ್ಲಿ 12ಗೆಲುವು


