ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸರಕಾರಿ ಉತ್ಸವಗಳಲ್ಲಿ ಒಂದಾದ ಕಾರವಾರದ ಕರಾವಳಿ ಉತ್ಸವ ಡಿಸೆಂಬರ್ 22ರಿಂದ28ರವರೆಗೆ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
ಈ ಬಾರಿ ಏಳು ದಿನಗಳ ಕಾಲ ಕರಾವಳಿ ಉತ್ಸವ ನಡೆಯಲಿದ್ದು ರಾಷ್ಟ್ರೀಯ ಮಟ್ಟದ ಗಾಯಕರು ಉತ್ಸವದಲ್ಲಿ ತಮ್ಮ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗಾಯಕರಾದ ಶಂಕರ ಮಹದೇವನ್, ಸೋನು ನಿಗಮ್, ಗುರುಕಿರಣ್, ರಫ್ತಾರ್, ದಾನೀಶ್, ದಲೇಹರ್ ಮೆಹಂದಿ ಏಳು ದಿನಗಳ ಕಾಲ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟು ಜಿಲ್ಲೆಯ ಜನರನ್ನ ರಂಜಿಸಲಿದ್ದಾರೆ. ಹಾಗೆ ಹತ್ತು ಹಲವು ಕಾರ್ಯಕ್ರಮಗಳನ್ನ ಆಯೋಜಿಸಿದ್ದು ಸ್ಥಳೀಯ ಕಲಾವಿದರಿಂದ ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಡೆಯಲಿದೆ…ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ಸರಕಾರ ನಿರ್ಧರಿಸಿದ್ದು ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮುಂದಾಳತ್ವ ದಲ್ಲಿ ಕರಾವಳಿ ಉತ್ಸವ ನಡೆಯಲಿದೆ…

ಈ ಹಿಂದೆ ಪ್ರತಿ ವರ್ಷ 3ದಿನಗಳ ಕಾಲ ಕರಾವಳಿ ಉತ್ಸವವನ್ನ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಇದೆ ಮೊದಲ ಬಾರಿಗೆ ಏಳು ದಿನಗಳ ಕಾಲ ಉತ್ಸವ ನಡೆಸಲಾಗುತ್ತಿದೆ. ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ಜಿಲ್ಲೆಯ ಜನರಿಗೆ ರಸಮಂಜರಿಯ ರಸದೌತಣ ಸಿಗಲಿದೆ. ಕರಾವಳಿ ಉತ್ಸವದ ಪ್ರ ಯುಕ್ತ ಈಗಾಗಲೆ ಪೇಂಟಿಂಗ್ ಸ್ಪರ್ದೇ ಸೇರಿ ವಿವಿಧ ಸ್ಪರ್ಧೆಗಳು ಆರಂಭಗೊಂಡಿದೆ…


