ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ: ಚಳಿಯಿಂದ ಬಿಸಿಯಾಗಲು ರೂಮ್‌ನಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ದುರ್ಮರಣ ಹೊಂದಿದ್ದು, ಮತ್ತೋರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮನ್ ನಗರದಲ್ಲಿ ನಡೆದಿದೆ.
ಕಾರ್ಯಕ್ರಮವೊಂದರಿಂದ ಮನೆಗೆ ಹಿಂತಿರುಗಿದ ನಾಲ್ವರು ಯುವಕರು ತೀವ್ರ ಚಳಿ ಕಾರಣದಿಂದ ರೂಮ್ ಒಳಗೆ ಇದ್ದಿಲು ಹಚ್ಚಿಕೊಂಡು ಮಲಗಿದ್ದರು. ನಿದ್ರೆಗೆ ಜಾರಿದ ಬಳಿಕ ರೂಮ್ ತುಂಬ ಹೊಗೆ ಆವರಿಸಿ ಉಸಿರಾಟದ ಸಮಸ್ಯೆ ಉಂಟಾಗಿ ಆಮ್ಲಜನಕ ಕೊರತೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಮನ್ ನಗರದ ನಿವಾಸಿಗಳಾದ, ರಿಹಾನ್ ಮತ್ತೆ (22), ಮೋಹಿನ್ ನಾಲಬಂದ (23), ಸರ್ಫರಾಜ್ ಹರಪ್ಪನಹಳ್ಳಿ (22) ಮೃತಯುವಕರಾಗಿದ್ದಾರೆ. ಇನ್ನೂ ಅಸ್ವಸ್ಥಗೊಂಡ ಶಾಹನಾವಾಜ್ (19) ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನಾ ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಶಾಸಕ ಆಸೀಫ್ ಸೇಠ ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Three Die of Suffocation in Belagavi; One in Critical Condition
Belagavi: In a tragic incident at Aman Nagar under the Malamaruti Police Station limits, three youths died of suffocation and another is undergoing treatment in critical condition after they lit a coal stove inside their room to stay warm due to severe cold.
After returning home from an event, the four youths reportedly lit a coal fire inside the room to escape the cold. As they fell asleep, the room filled with smoke, leading to breathing difficulties. It is suspected that the three died on the spot due to lack of oxygen.
The deceased have been identified as Rehan Matte (22), Mohin Nalaband (23), and Sarfaraz Harappanahalli (22), all residents of Aman Nagar. Shahnavaz (19), who was also affected, has been admitted to the hospital.
Malamaruti Police rushed to the spot and conducted an inspection. MLA Asif Seth also visited the location and gathered information. A case has been registered at the Malamaruti Police Station.
ಇದನ್ನೂ ಓದಿ/ಶಿರಸಿ ನಗರದಲ್ಲಿ ಬೀಡಾಡಿ ಜಾನುವಾರು ನಿಯಂತ್ರಣಕ್ಕೆ ಜಂಟಿ ತಂಡ ರಚನೆ :10 ದಿನಗಳ ಗಡುವು


