ಸುದ್ದಿಬಿಂದು ಬ್ಯೂರೋ‌ ವರದಿ
ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಕಜಕಿಸ್ತಾನದ ಮಹಿಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯದಲ್ಲಿ ಸಿಲುಕಿದ್ದ ಮಹಿಳೆಯನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಸಮುದ್ರದ ಭಾರೀ ಅಲೆಗೆ ಸಿಲುಕಿದ‌್ದ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ. ಇದನ್ನ ಗಮನಿಸಿದ‌ ಕರ್ತವ್ಯದಲ್ಲಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಚರಣೆಗೆ ಇಳಿದು ಭಾರೀ ಅಲೆಯ ನಡುವೆಯೂ ಮಹಿಳೆಯನ್ನ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.

ಮಹಿಳೆಯನ್ನು ಮಂಜುನಾಥ ಹರಿಕಂತ್ರ,ಗಿರೀಶ ಗೌಡ, ಲಕ್ಷ್ಮಿಕಾಂತ ಹರಿಕಂತ್ರ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಇವರ ಸಾಹಸಿ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋಕರ್ಣ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Kazakhstan Tourist Rescued from Powerful Waves at Gokarna’s Kuddle Beach
Gokarna: At Kuddle Beach in Gokarna, Uttara Kannada district, a tourist woman from Kazakhstan who had come to visit the beach was caught in strong sea waves and was in danger. The alert lifeguard team rescued her in a swift operation.

The woman, who was pulled away by the heavy waves, screamed for help. Noticing this, the on-duty lifeguards immediately rushed into action and, despite the rough waves, safely brought her back to shore.

The woman was rescued by lifeguards Manjunath Harikantra, Girish Gowda, and Lakshmikant Harikantra. Their brave operation has received appreciation from locals as well as tourists.
The incident took place under the jurisdiction of Gokarna Police Station.

ಇದನ್ನೂ ಓದಿ/ಸೂಳೆಮೂರ್ಕಿ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 29 ಪ್ರಯಾಣಿಕರಿಗೆ ಗಾಯ