ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಕಾಗಾಲ ಗ್ರಾಮದ ಪ್ರಗತಿಪರ ಯುವ ರೈತ ಕಡ್ಲೆ ಮನೆ ನಾಗರಾಜ ಮೋಹನ ನಾಯ್ಕ ಅವರ ಹೊಲದಲ್ಲಿ ಸ್ಕೊಡ್ವೇಸ್ ಸಂಸ್ಥೆಯ ವತಿಯಿಂದ ಸಮುದಾಯ ಆಧಾರಿತ ‘ಸೀಡ್ ಬ್ಯಾಂಕ್’ (Community Seed Bank) ಉದ್ಘಾಟನೆಯ ಜೊತೆಗೆ ವಿಶಿಷ್ಟ ತಳಿಗಳ ಕ್ಷೇತ್ರ ವೀಕ್ಷಣೆ ಮತ್ತು ಸಾಂಕೇತಿಕ ಪೈರು ಕಟಾವು ಕಾರ್ಯಕ್ರಮ ನೆರವೇರಿತು.

ಖ್ಯಾತ ಪರಿಸರ ವಿಜ್ಞಾನಿ ಡಾ. ಸುಭಾಷ್ ಚಂದ್ರನ್ ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಹಾಜರಿದ್ದ ಪ್ರೊ.ನಾಗೇಶ ನಾಯ್ಕ ಕಾಗಾಲ ಅವರು ಸ್ಥಳೀಯ ಪರಂಪರೆಯ ತಳಿಗಳ ಸಂರಕ್ಷಣೆಯಲ್ಲಿ ನಾಗರಾಜ ನಾಯ್ಕ ನೀಡುತ್ತಿರುವ ಕೊಡುಗೆ ಶ್ಲಾಘನೀಯವೆಂದು ಪ್ರಶಂಸಿಸಿದರು.

ಸ್ಥಳೀಯವಾಗಿ ಪ್ರಸಿದ್ಧವಾದ ‘ಕಗ್ಗ’, ‘ಆರ್ಯನ್’, ‘ಹಳಗ’, ‘ಚಿಟಗ’ ಸೇರಿ 600ಕ್ಕೂ ಹೆಚ್ಚು ವೈವಿಧ್ಯಮಯ ಭತ್ತದ ತಳಿಗಳನ್ನು ಸಂಗ್ರಹಿಸಿ,ಅವುಗಳ ಬೀಜ ಸಂಗ್ರಹಣೆಗೆ ಸಮುದಾಯ ಬೀಜ ಸಂಗ್ರಹಣಾಲಯ ನಿರ್ಮಿಸುವ ಕಾರ್ಯ ಮಹತ್ವದ್ದಾಗಿದೆ ಎಂದು ಹೇಳಿದರು. ವಿಶೇಷ ಗುಣಧರ್ಮವುಳ್ಳ ಈ ತಳಿಗಳ ಸಕಾಲಿಕ ಕಟಾವು, ಶ್ರೇಣೀಕರಣ, ಸೂಕ್ತ ಸಂಸ್ಕರಣೆ ಮತ್ತು ಆಕರ್ಷಕ ಪ್ಯಾಕಿಂಗ್ ಮೂಲಕ ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ಬೇಡಿಕೆ ಹೆಚ್ಚಿಸಲು ಯೋಜನೆ ರೂಪಿಸಬೇಕು ಎಂದು ಅವರು ರೈತರಿಗೆ ಸಲಹೆ ನೀಡಿದರು.

ಇವು ಲಾಭದಾಯಕ ಕೃಷಿ ಉದ್ಯಮವಾಗಿ ಬೆಳೆದು, ಅವಲಂಬಿತ ರೈತರ ಆದಾಯ ಹೆಚ್ಚಲು ಸಹಕಾರಿ ಆಗುವಂತೆ ಕಾರ್ಯತಂತ್ರ ರೂಪಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸ್ಕೊಡ್ವೇಸ್ ಸಂಸ್ಥೆಯ ಗಂಗಾಧರ ನಾಯ್ಕ, ಹಿರಿಯ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್,ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಕೆ. ನಾಯ್ಕ, ಸೂರಜ್ ನಾಯ್ಕ ಸೋನಿ,ವಿಠೋಬ ಅಂಗಡಿಕೇರಿ,ಎಸ್.ವಿ. ಭಟ್,ಎಂ.ಟಿ. ನಾಯ್ಕ, ದಿವಾಕರ ನಾಯ್ಕ,ಶಂಕರ ಶರ್ಮಾ, ಜಾಹ್ನವಿ ಭಟ್, ಟ್ರಿಬ್ಯೂನಲ್ ಸದಸ್ಯೆ ಸುರೇಖಾ ನಾಯ್ಕ, ಮಮತಾ ನಾಯ್ಕ, ಸಿ.ಜಿ. ಹೆಗಡೆ, ಸುಬ್ಬಯ್ಯ ನಾಯ್ಕ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Field Visit of Unique Paddy Varieties and Symbolic Harvesting Program
Kumta: At the farmland of progressive young farmer Nagraj Mohan Naik of Kadle Mane in Kagala village of Kumta taluk, a community-based “Seed Bank” (Community Seed Bank) was inaugurated by the Skodways organization, along with a field visit showcasing unique paddy varieties and a symbolic crop harvesting program.

Renowned environmental scientist Dr. Subhash Chandra inaugurated the event in the presence of dignitaries. Chief guest Prof. Nagesh Naik Kagala praised Nagraj Naik for his commendable contribution toward preserving local traditional paddy varieties.

He said that the initiative of collecting over 600 diverse paddy varieties—including locally famous types such as Kagga, Aryan, Halaga, and Chitaga—and establishing a community seed storage facility is of great significance. He advised farmers to develop a plan to enhance market demand by adopting timely harvesting, proper grading, scientific processing, and attractive packaging of these special varieties with unique characteristics.

He expressed the opinion that such initiatives can grow into profitable agri-enterprises and help increase the income of dependent farmers through well-planned strategies.

The program was attended by Skodways representative Gangadhar Naik, Senior Assistant Agriculture Director Venkatesh, retired Senior Police Officer Shankar K. Naik, Suraj Naik Soni, Vitthoba Angadkeri, S.V. Bhat, M.T. Naik, Divakar Naik, Shankar Sharma, Jahnavi Bhat, Tribunal member Surekha Naik, Mamatha Naik, C.G. Hegde, Subbaiya Naik, and many other dignitaries.

ಇದನ್ನೂ ಓದಿ/ದಾಂಡೇಲಿಯಲ್ಲಿ ಬಿದಿ ನಾಯಿಗಳ ಹಾವಳಿ: ನಾಲ್ಕು ದಿನದಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ