ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಹಾಗೂ ರಾಜ್ಯಕೋರ್ ಕಮಿಟಿ ಸದ್ಯ ಸೂರಜ್ ನಾಯ್ಕ ಸೋನಿ ಕುಮಾರಸ್ವಾಮೀ ಅವರ ಭೇಡಿಯಾಗಿ ಆರೋಗ್ಯ ವಿಚಾರಿಸಿದ್ದು.‌ ಈ ವೇಳೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕುರಿತಾಗಿ ಚರ್ಚೆ ನಡೆಸಿದ್ದರು.

ಸಂಕ್ರಾಂತಿ ಬಳಿಕ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಮಾಡುವುದಾಗಿ ತಿಳಿಸಿದ ಆನಂದ ಅಸ್ನೋಟಿಕರ್‌ ಶೀಘ್ರದಲ್ಲಿಯೇ ಸಮಾವೇಶ ದಿನಾಂಕವನ್ನ‌ ಘೋಷಣೆ ಮಾಡಲಾವುದು ಎಂದಿದ್ದಾರೆ..ಪಕ್ಷವನ್ನ ತಳಮಟ್ಟದ ಸಂಘಟನೆ ಮತ್ತು ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ದಿಶೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಸಮಾವೇಶಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ, ನಿಖೀಲ್‌ಕುಮಾರಸ್ವಾಮಿ ಜಿಲ್ಲೆಯ ಜೆಡಿಎಸ್ ನಾಯಕರು ಸೇರಿದಂತೆ ಹಲವು ನಾಯಕರನ್ನ ಕರೆತರುವ ಪ್ರಯತ್ನ ಇದೆ ಎನ್ನಲಾಗಿದೆ. 2028ರ ಚುನಾವಣೆಗೆ ಜೆಡಿಎಸ್ ಸಿದ್ದತೆಗೆ ಮುಂದಾಗಿದೆ.

ಮುಂದಿನ ವಿಧಾನಸಭಾ ಚುನಾವಣೆ ಕೂಡ‌ ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿಯೇ ಮುಂದುವರೆಯುವ ಸಾಧ್ಯತೆ ಪ್ರತ್ಯೇಕವಾಗಿ ಸಮಾವೇಶ ನಡೆಸಿದರು ಚುನಾವಣೆಯಲ್ಲಿ ಎರಡು ಪಕ್ಷಗಳು ಸೇರಿಯೇ ಒಮ್ಮತದ ಅಭ್ಯರ್ಥಿಯನ್ನ ಕಣಕ್ಕೆ‌ ಇಳಿಸಲಿದೆ ಎನ್ನಲಾಗಿದೆ.

ಟಿಫಿನ್ ಬಾಕ್ಸ್‌ನಲ್ಲಿದ್ದ ಕ್ರೀಮ್ ಬಿಸ್ಕೆಟ್‌ನಲ್ಲಿ ಜೀವಂತ ಹುಳು ಪತ್ತೆ :ದಾಂಡೇಲಿಯಲ್ಲಿ ಘಟನೆ