ಸುದ್ದಿಬಿಂದು ಬ್ಯೂರೋ ವರದಿ(Suddibindu Digital News)
ಮಲ್ಪೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಎಸ್ಐ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಸಾಗಿಸುವಷ್ಟರೊಳಗೆ ಮೃತ ಪಟ್ಟ ಘಟನೆ ನಡೆದಿದೆ.

ಉಡುಪಿಯ ಮಲ್ಪೆ ಪೊಲೀಸ್ ಠಾಣೆಯ ಎಎಸ್‌ಐ ವಿಶ್ವನಾಥ್ (58) ಅವರು ಹೃದಯಾಘಾತದಿಂದ ನಿಧರಾಗಿದವರಾಗಿದ್ದಾರೆ. ಅವರು (ನಿನ್ನೆ)ನವೆಂಬರ್ 1ರಂದು ರಾತ್ರಿ ಮಲ್ಪೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಬಳಿಕ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಹೃದಯಾಘಾತದಿಂದ ವಿಶ್ವನಾಥ್ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ..

ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ವಿಶ್ವನಾಥ್‌ ಅವರು ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ಇತ್ತೀಚೆಗಷ್ಟೇ ಮಲ್ಪೆ ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರ ಅಕಾಲಿಕ ನಿಧನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಹಾಗೂ ಅನೇಕರು ಸಂತಾಪ ಸೂಚಿಸಿದ್ದಾರೆ.

Udupi: Malpe Police Station Assistant Sub-Inspector (ASI) Vishwanath (58) passed away following a heart attack.

On the night of November 1, while attending a program in Malpe, Vishwanath reportedly experienced health complications. He suddenly complained of chest pain and collapsed. He was immediately rushed to the hospital, but doctors confirmed that he had already passed away due to a heart attack.

Vishwanath had served in several police stations across Udupi district and was known for his friendly rapport with the public. He had recently been transferred to the Malpe station. His untimely demise has cast a shadow of grief over the local community.

ಇದನ್ನೂ ಓದಿ:ಹೊನ್ನಾವರದ ಸೂಳೆಮೂರ್ಕಿ ಬಳಿ ಬಸ್ ಕಾರು ನಡುವೆ ಭೀಕರ ಅಪಘಾತ ; ಓರ್ವ ಸಾವು ಹತ್ತಕ್ಕೂ ಹೆಚ್ಚುಮಂದಿ ಗಂಭೀರ