ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : 18 ಗ್ರಾಮದ ಅಧಿದೇವರಾಗಿರುವ ಕಾರವಾರ ಬಾಡದ ಶ್ರೀ ಮಹಾದೇವ ವಿನಾಯಕ ದೇವಸ್ಥಾನದಲ್ಲಿ ನವಂಬರ್ 5 ಹಾಗೂ 6 ರಂದು ದೇವರ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವಂಬರ್ 5 ರಂದು ಬೆಳಗ್ಗೆ ಅರ್ಚಕರಿಂದ ಅಭಿಷೇಕ, ಅದಾದ ನಂತರ ತುಲಾಭಾರ, 12.30ಕ್ಕೆ ಪೂಜೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ದೇವರ ಪಲ್ಲಕ್ಕಿಯೂ ಹಬ್ಬುವಾಡ ಗಣಪತಿ ದೇವಸ್ಥಾನದ ವನಭೋಜನಕ್ಕೆ ತೆರಳಲಿದೆ. ದೇವರ ಸಾನಿಧ್ಯದಲ್ಲಿ ಪೂಜಾ ಕಾರ್ಯ ಮುಗಿದ ನಂತರ ಸಂಜೆ 6 ಕ್ಕೆ ವನಭೋಜನ ಶುರುವಾಗಲಿದೆ. ಅದಾದ ಪರಂಪರೆಯಂತೆ ಶ್ರೀ ದೇವರ ಪಲ್ಲಕ್ಕಿಯು ಐದು ದೇವರ ಕಟ್ಟೆ ತಿರುಗುವುದು. ಆ ನಂತರ ಮಹಾಪೂಜೆ ನಡೆಯಲಿದೆ.
ಆ ದಿನ ರಾತ್ರಿ 9 ಗಂಟೆಗೆ ಗಣಪತಿ ದೇವಸ್ಥಾನದಿಂದ ಕಾರವಾರ ಮಾರ್ಗವಾಗಿ ಭಕ್ತರ ಆರತಿ ಸ್ವೀಕರಿಸುತ್ತ ಮಹಾದೇವಸ್ಥಾನಕ್ಕೆ ಮೆರವಣಿಗೆ ಬರಲಿದ್ದು, ಅಲ್ಲಿ ದೇವರ ಪಾರಂಪರಿಕ ಪೂಜಾ ವಿಧಾನ ದೇವರು ತೊಟ್ಟಿಲಿನಲ್ಲಿ ವಿರಾಜಿಸುವ ಕಾರ್ಯಕ್ರಮ ಜರುಗಲಿದೆ. ನವೆಂಬರ್ 6 ರ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಕೋಡಿಭಾಗದ ಭಕ್ತವೃಂದದಿಂದ ಕೋಲಾಟ, ದೆವಳಿ ಸಮುದಾಯದವರಿಂದ ನರ್ತನವನ್ನು ಆಯೋಜಿಸಲಾಗಿದೆ.
ಅದಾದ ನಂತರ ದಹಿಕಾಲ ಉತ್ಸವ ನಡೆಯಲಿದೆ. ದೇವರು ಅವಬೃತಸ್ನಾನಕ್ಕೆ ಕೋಡಿಭಾಗದ ಕಾಳಿ ನದಿ ಸನ್ನಿಧಿಗೆ ತೆರಳಿ ನಂತರ ರಾತ್ರಿ ದೇವಾಲಯಕ್ಕೆ ಹಿಂತಿರುಗಿ ಅಷ್ಟಾವಧಾನ ಪೂಜಾ ವಿಧಾನ ನೆರವೇರಿಸಲು ಉದ್ದೇಶಿಸಲಾಗಿದೆ. ಅದಾದ ನಂತರ ಸವಾಲು, ಸವಾಲು ಮುಗಿದ ಮೇಲೆ ಬಾಡದ ಮಹಾದೇವ ನಾಟ್ಯ ಮಂಡಳಿಯವತಿಯುಂದ ರಾತ್ರಿ 10.30 ಗಂಟೆಗೆ `ಮಗ ತಂದ ಮಾಂಗಲ್ಯ’ ಎಂಬ ನಾಟಕ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು ಎಂದು ಅಧ್ಯಕ್ಷರು ಅರವಿಂದ ಗುನಗಿ ಶ್ರೀ ಮಹಾದೇವ ವಿನಾಯಕ ವ್ಯವಸ್ಥಾಪನಾ ಸಮಿತಿ ಬಾಡ ಕಾರವಾರ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Karwar: The annual fair of Sri Mahadeva Vinayaka Temple, the presiding deity of 18 villages in Baada, Karwar, will be celebrated on November 5 and 6. Various religious programs have been organized over these two days as part of the festivities.
On November 5, the day will begin with abhisheka performed by the temple priests, followed by Tulabhara and pooja at 12:30 PM. At 1:00 PM, the deity’s pallakki (palanquin) will proceed to the Habbuwada Ganapati Temple for a community feast (Vanabhojana). After the rituals under the divine presence, the feast will begin at 6:00 PM. Later, as per tradition, the deity’s pallakki will visit the five sacred spots (Katte), followed by the Mahapooja at the temple.
At 9:00 PM, a grand procession will begin from the Ganapati Temple, proceeding via Karwar, with devotees offering aarati along the way. Upon reaching the Mahadeva Temple, the traditional ritual of placing the deity in a cradle (Thottilu) will take place.
On November 6 (Thursday), from 3:00 PM onwards, devotees from Kodibag will perform Kolata (folk dance), followed by a traditional dance performance by members of the Devli community. After this, the Dahikala Utsav (festival ritual) will be held.
Later, the deity will proceed to the banks of the Kali River in Kodibag for the Avabrutha Snana (ritual bath) and return to the temple for the Ashtavadhana Pooja. Following this, the traditional Savaalu event will take place.
At 10:30 PM, the Baada Mahadeva Natya Mandali will present a drama titled “Maga Tanda Mangalya” (The Son’s Auspicious Marriage).
The Sri Mahadeva Vinayaka Temple Management Committee, led by President Aravind Gunagi, has invited all devotees to actively participate and seek the blessings of Lord Mahadeva.
ಇದನ್ನೂ ಓದಿ/“ನಮ್ಮ ಕುಟುಂಬದಲ್ಲಿ ಯಜಮಾನರಿದ್ದಾರೆ. ಹೀಗಾಗಿ ನಾವು ಮಂತ್ರಿಯಾಗಿರೋದು : ಸಚಿವ ಮಂಕಾಳ್ ವೈದ್ಯ ಹೇಳಿಕೆ”


