ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ತಾಲೂಕಿನ ಕಾಸರಕೋಡ ಬಟ್ಟೆ ವಿನಾಯಕಕೇರಿ ಪ್ರದೇಶದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ದಂಪತಿಯೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಸಂತೋಷ ಗೌಡ ಮತ್ತು ಅವರ ಪತ್ನಿ ಶೀತು ಗೌಡ ಎಂದು ಗುರುತಿಸಲಾಗಿದೆ. ಮನೆಯ ಬಳಿಯಿಂದ ಹಾದು ಹೋಗುತ್ತಿದ್ದ ವಿದ್ಯುತ್ ಲೈನ್ ಅಕಸ್ಮಿಕವಾಗಿ ಹರಿದು ಬಿದ್ದು, ದಂಪತಿ ಇಬ್ಬರಿಗೂ ಶಾಕ್ ತಗುಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಬಳಿಕ ಇಬ್ಬರ ಮೃತದೇಹಗಳನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಸ್ಥಳೀಯರು ಮತ್ತು ಬಂಧುಗಳು ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ, “ನ್ಯಾಯ ಸಿಗುವವರೆಗೂ ಮೃತದೇಹ ಸ್ವೀಕರಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ ದಿನವೇ ಈ ಅವಘಡ ಸಂಭವಿಸಿರುವುದು ಪ್ರದೇಶದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಮೃತರಿಗೆ ಇಬ್ಬರು ಪುತ್ರರು ಇದ್ದಾರೆ. ಸರಕಾರಿ ಆಸ್ಪತ್ರೆ ಎದುರು ಪ್ರತಿಟನೆ ಜೋರಾಗಿದ್ದು, ಬೀಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ/  ಕಾರವಾರದ ಬಾಂಡಿಶಿಟ್ಟಾ ಬಳಿ ಅಪಘಾತ : ಸ್ಥಳದಲ್ಲೇ ಮಹಿಳೆ ಸಾವು