ಸುದ್ದಿಬಿಂದು ಬ್ಯೂರೋ ವರದಿ
ಉಡುಪಿ : ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಹಿರಿಯ ರಂಗಕರ್ಮಿ ಹಾಗೂ ಕಲಿಯುಗಧ ಕುಡುಕ ನಟ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರು ಎಳೆದಿದ್ದಾರೆ.
ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಉಡುಪಿಗೆ ಬಂದಿದ್ದ ರಾಜು ತಾಳಿಕೋಟೆ, ಶೂಟಿಂಗ್ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಚಾನಕ್ ಉಸಿರಾಟದ ತೊಂದರೆಯಿಂದ ಕುಸಿದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹಿಂದೆಯೂ ಒಮ್ಮೆ ಹೃದಯಾಘಾತವಾಗಿದ್ದ ಅವರಿಗೆ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾದ ಕಾರಣ ಮತ್ತೆ ಹೃದಯಾಘಾತವಾದ ಸಾಧ್ಯತೆ ವ್ಯಕ್ತವಾಗಿದೆ.
ಅವರ ಅಂತ್ಯಕ್ರಿಯೆ ವಿಜಯಪುರದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಸಮಾನವಾಗಿ ಚಿರಸ್ಥಾಯಿಯಾದ ರಾಜು ತಾಳಿಕೋಟೆ, ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೇ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಲ್ಲೂ ಭಾಗವಹಿಸಿದ್ದರು.
ನಿನ್ನೆ ರಾತ್ರಿ 12ರ ಸುಮಾರಿಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದರೆ ಇಂದು ಅವರು ನಿಧನರಾದರು. ಎರಡು ದಿನಗಳ ಶೂಟಿಂಗ್ನಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ /ಕಿಮಾನಿ ವ್ಯಕ್ತಿ ಸಾವಿನ ಬೆನ್ನು ಬಿದ್ದ ಪೊಲೀಸ್ : ಏನಿದು ಮಹತ್ವದ ಬೆಳವಣಿಗೆ