ದೀಪಾವಳಿಯ ಸಂಭ್ರಮಕ್ಕೆ ತಕ್ಕಂತೆಯೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2025 ಸೇಲ್ ಅಧಿಕೃತವಾಗಿ ಆರಂಭಗೊಂಡಿದೆ. ಈ ಹಬ್ಬದ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳು, ಫ್ಯಾಷನ್, ಎಲೆಕ್ಟ್ರಾನಿಕ್ಸ್ ಮತ್ತು ಬ್ಯೂಟಿ ಉತ್ಪನ್ನಗಳವರೆಗೆ ಸಾವಿರಾರು ವಸ್ತುಗಳ ಮೇಲೆ ಭಾರಿ ರಿಯಾಯಿತಿ ದೊರೆಯುತ್ತಿದೆ.
ಗ್ರಾಹಕರಿಗೆ ಈ ಸೇಲ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಹಾಗೂ 30 ಸಾವಿರಕ್ಕೂ ಅಧಿಕ ಹೊಸ ವಸ್ತುಗಳ ಮೇಲೆ ಬೆಲೆ ಕಡಿತದ ಆಫರ್‌ಗಳು ಸಿಗುತ್ತಿವೆ.
ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್‌ಗಳಲ್ಲಿ ದೀಪಾವಳಿ ಡೀಲ್‌ಗಳು
ಸ್ಯಾಮ್‌ಸಂಗ್, ಆಪಲ್, ಒನ್‌ಪ್ಲಸ್ ಮತ್ತು ಐಕ್ಯೂ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಈಗ ಅಗ್ಗದ ಬೆಲೆಯಲ್ಲಿ ಲಭ್ಯ.
Galaxy S24 Ultra, iPhone 15, OnePlus 13R ಮೊದಲಾದ ಪ್ರೀಮಿಯಂ ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳು ನೀಡಲಾಗಿದೆ.ಟಿವಿ, ಲ್ಯಾಪ್‌ಟಾಪ್, ಹೆಡ್‌ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೂ ಮೆಗಾ ಡೀಲ್‌ಗಳು ಸಿಗುತ್ತಿವೆ.
ಎಲೆಕ್ಟ್ರಿಕ್ ಸ್ಕೂಟರ್‌ಗೂ ಹಬ್ಬದ ಆಪರ್
ಈ ಬಾರಿ ದೀಪಾವಳಿಗೆ ಎಲೆಕ್ಟ್ರಿಕ್ ವಾಹನಗಳ ಮೇಲೂ ವಿಶೇಷ ಕೊಡುಗೆ ಇದೆ. Ather Rizta S ಎಲೆಕ್ಟ್ರಿಕ್ ಸ್ಕೂಟರ್ ಮತ್ತು Hero Xtreme 125R ABS ಬೈಕ್ ಮಾದರಿಗಳು ದೀಪಾವಳಿ ಆಫರ್ ಬೆಲೆಯಲ್ಲಿ ಲಭ್ಯ.
ಅಮೆಜಾನ್ ಬಜಾರ್ ವಿಭಾಗದಲ್ಲಿ ₹49 ರಿಂದ ಪ್ರಾರಂಭವಾಗುವ ಫ್ಯಾಷನ್ ಹಾಗೂ ಹೋಮ್ ಡೆಕೊರ್ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಫ್ಯಾಷನ್ ಮತ್ತು ಬ್ಯೂಟಿ ವಿಭಾಗದಲ್ಲೂ ಶೇ. 80 ವರೆಗೆ ರಿಯಾಯಿತಿ
ದೀಪಾವಳಿಯ ಸಂಭ್ರಮಕ್ಕೆ ತಕ್ಕಂತೆ ಅಮೆಜಾನ್ ಫ್ಯಾಷನ್, ಶೂ, ಆಭರಣ ಹಾಗೂ ಬ್ಯೂಟಿ ವಿಭಾಗಗಳಲ್ಲಿ ಶೇ. 80 ವರೆಗೆ ರಿಯಾಯಿತಿ ನೀಡಿದೆ.
ಮೇಕಪ್ ಮತ್ತು ಸುಗಂಧದ್ರವ್ಯಗಳ ಮೇಲೆ ಶೇ. 40–70 ರಿಯಾಯಿತಿ ಲಭ್ಯವಿದ್ದು, ವೈಯಕ್ತಿಕ ಆರೈಕೆ ವಸ್ತುಗಳ ಮೇಲೂ ಶೇ. 60 ವರೆಗೆ ಉಳಿತಾಯ ಸಿಗುತ್ತದೆ.
ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ಗಳು
ಆಕ್ಸಿಸ್ ಬ್ಯಾಂಕ್, ಆರ್‌ಬಿಎಲ್, ಐಡಿಎಫ್‌ಸಿ ಹಾಗೂ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಶೇ. 10 ತ್ವರಿತ ರಿಯಾಯಿತಿ ಸಿಗುತ್ತದೆ.
ಅದೇ ರೀತಿ Amazon Pay ICICI Bank ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 5 ಕ್ಯಾಶ್‌ಬ್ಯಾಕ್ ಹಾಗೂ ಹೆಚ್ಚುವರಿ ರಿವಾರ್ಡ್ ಲಾಭಗಳೂ ಲಭ್ಯ.
ಈ ಹಬ್ಬದ ಕಾಲದಲ್ಲಿ ಅಮೆಜಾನ್ ಪ್ರತಿದಿನ ಹೊಸ ಡೀಲ್‌ಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರ ಖರೀದಿಯನ್ನು ಮತ್ತಷ್ಟು ಹಬ್ಬದಂಥ ಅನುಭವವನ್ನಾಗಿಸಿದೆ.ದೀಪಾವಳಿ ಶಾಪಿಂಗ್‌ಗೆ ಸಕಾಲ ಅಮೆಜಾನ್ ಸೇಲ್ ಈಗ ಲೈವ್
ಇದನ್ನೂ ಓದಿ: ಸಿನಿಮೀಯ ದರೋಡೆ ಯತ್ನ :
ಕೂದಲೆಳೆ ಅಂತರದಲ್ಲಿ ಪಾರಾದ ಕುಮಟಾ ಮೂಲದ ಕುಟುಂಬ