ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಬೆಂಗಳೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ತಮ್ಮ ಮೂರು ವರ್ಷದ ಮಗುವನ್ನು ಕಡಲತೀರದಲ್ಲಿ ಬಿಟ್ಟು ಹೋಗಿದ್ದು,  ಅಲ್ಲಿನ ಬೋಟಿಂಗ್ ಸಿಬ್ಬಂದಿಗಳಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇಂದು ಮಧ್ಯಾಹ್ನದ ಸಮಯಲ್ಲಿ  ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಕುಟುಂಬವೊಂದು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಮೂರು ವರ್ಷದ ಮಗುವನ್ನ ಕಡಲ ತೀರದಲ್ಲೇ ಬಿಟ್ಟು ಹೋಗಿದ್ದರು. ಇದನ್ನ ಗಮನಿಸಿದ ಓಷನ್ ಅಡ್ವೆಂಚರ್ ಬೋಟಿಂಗ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ಅಪಾಯದಲ್ಲಿ ಸಿಲುಕಿದ ಮಗುವಿನ ಜೀವ ಉಳಿದುಕೊಂಡಿದೆ.

ಮಗು‌‌ ಸಮುದ್ರ ತೀರದಲ್ಲಿ ಅಳುತ್ತ ನಿಂತಿರುವುದನ್ನ ಗಮಸಿದ ಬೋಟಿಂಗ್ ಸಿಬ್ಬಂದಿಯೊಬ್ಬರು, ತಕ್ಷಣ ತಮ್ಮ ತಂಡದ ಸಹಕಾರದಿಂದ ಮಗುವನ್ನ ರಕ್ಷಣೆ ಮಾಡಿದ್ದಾರೆ. ಓಷನ್ ಅಡ್ವೆಂಚರ್ ಬೋಟಿಂಗ್ ಸಿಬ್ಬಂದಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Murudeshwar: A major tragedy was averted at Murudeshwar Beach after boating staff rescued a three-year-old child who had been left behind by his parents visiting from Bengaluru.

The incident occurred this afternoon when a family from Bengaluru had come to Murudeshwar for a trip. In a shocking turn of events, they reportedly left their three-year-old child unattended on the beach.

Fortunately, members of the Ocean Adventure Boating team noticed the child crying near the shore. Acting swiftly, one of the staff members, along with his team, rescued the child from potential danger.

Their timely intervention and alertness prevented what could have been a heartbreaking incident, earning the boating staff widespread appreciation from locals and tourists alike.

ಇದನ್ನೂ ಓದಿ: ಮುಖ್ಯಾಧಿಕಾರಿ ಪಡೆಯುವ ಲಂಚದಲ್ಲಿ ಯಾರಿಗೆಲ್ಲಾ ಎಷ್ಟು ಪಾಲು..?