ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಹಳದಿಪುರ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷೆಯಾಗಿದ್ದ ಪುಷ್ಪಾ ಮಹೇಶ್ ನಾಯ್ಕ್ ಇಂದು ಬೆಳಗಿನ ಜಾವ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆಯಲ್ಲಿ ನಿಧನರಾಗಿದ್ದಾರೆ.

ಮೃತ ಪುಷ್ಪಾ ನಾಯ್ಕ ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾಗಿರುವ ಮಹೇಶ ನಾಯ್ಕ ಅವರ ಧರ್ಮಪತ್ನಿಯಾಗಿದ್ದರು, ಅನಾರೋಗ್ಯದ ಕಾರಣ ಅವರನ್ನ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಪುಷ್ಪಾ ನಾಯ್ಕ ಅವರು ಕಾಂಗ್ರೇಸ್‌ನಲ್ಲಿ ಗುರುಸಿಕೊಂಡವರಾಗಿದ್ದರು. ಹಳದಿಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಮೃತ ದೇಹವನ್ನ ತರಲಾಗಿದ್ದು, ನಂತರ ಮನೆಗೆ ಸಾಗಿಸಿ ಬಳಿಕ ಹಳದಿಪುರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪುಷ್ಪಾ ನಾಯ್ಕ ಅವರ ನಿಧನಕ್ಕೆ ಗ್ರಾಮಸ್ಥರು, ಸೇರಿದಂತೆ ಅನೇಕರು ಸಂತಾಪಕೋರಿದ್ದಾರೆ.

ಇದನ್ನೂ ಓದಿ : ಮುರುಡೇಶ್ವರ ಕಡಲತೀರದಲ್ಲಿ ಬಿಟ್ಟು ಹೋದ ಬೆಂಗಳೂರು ಮೂಲದ ಮೂರು ವರ್ಷದ ಮಗು ರಕ್ಷಣೆ