ಕಾರವಾರ:(Karwar) ಇಲ್ಲಿನ ದೇವಭಾಗ ಕಡಲತೀರದಲ್ಲಿ ಇಂದು ರಾಶಿ ರಾಶಿ ಮೀನುಗಳು ದಡಕ್ಕೆ ತೇಲಿ ಬಂದ ಹಿನ್ನೆಲೆ ಸ್ಥಳೀಯರು ಸ್ಥಳೀಯರು ಮೀನು ಹಿಡಿಯಲು ಮುಗಿಬಿದ್ದರು.
ಸಮುದ್ರದಲ್ಲಿ ಹವಾಮಾನದಲ್ಲಿ ಉಂಟಾಗಿರುವ ತೀವ್ರ ಬದಲಾವಣೆಯ ಹಿನ್ನಲೆಯಲ್ಲಿ ಕಡಲತೀರದ ಉದ್ದಕ್ಕೂ ರಾಶಿ ರಾಶಿ ಮೀನುಗಳು ಸಮುದ್ರದ ದಡಕ್ಕೆ ತೇಲಿ ಬಂದಿತ್ತು. ತಾರ್ಲೆ ಮತ್ತು ಇತರೆ ಸಣ್ಣ ಮೀನುಗಳು ದಡಕ್ಕೆ ಬಂದು ಅಪ್ಪಳಿಸಿತ್ತು. ರಾಶಿ ರಾಶಿ ಮೀನು ಬರುತ್ತಿರುವುದನ್ನ ಕಂಡ ಗ್ರಾಮಸ್ಥರು ತಕ್ಷಣ ಬಲೆ, ಬುಟ್ಟಿ, ಮುಂತಾದವುಗಳನ್ನು ಹಿಡಿದು ಬೀಚ್‌ಗೆ ಬಂದು ಒಬ್ಬರಿಗಿಂತ ಒಬ್ಬರು ಅತೀ ಹೆಚ್ಚು ಮೀನುಗಳನ್ನ ಸಂಗ್ರಹಿಸಿಕೊಂಡು ಹೋಗಿದ್ದಾರೆ..
ಇನ್ನೂ ಕೆಲವರು ಕೈಯಲ್ಲೇ ಮೀನು ಹಿಡಿದು ಮನೆಗೆ ತೆರಳಿದರು. ಕಡಲತೀರದಲ್ಲಿ ರಾಶಿ ರಾಶಿ ಮೀನು ಬಿದ್ದಿರುವುದರಿಂದ ಬೆಳಿಗ್ಗೆಯಿಂದಲ್ಲೆ ದೇವಭಾಗ ಕಡಲತೀರದಲ್ಲಿ ಒಂದು ರೀತಿಯಲ್ಲಿ ಹಬ್ಬದಂತ ವಾತಾವರಣ ನಿರ್ಮಾಣವಾಗಿತ್ತು. ಬಂದ ಜನರು ಕೇವಲ ಮನೆ ಬಳಕೆಗೆ ಮಾತ್ರವಲ್ಲದೆ ಮಾರಾಟಕ್ಕಾಗಿ ಸಹ ಮೀನುಗಳನ್ನು ತೆಗೆದುಕೊಂಡು ಹೋಗಿರುವುದು ಕಂಡುಬಂತು..
ಕೆಲ ದಿನಗಳ ಹಿಂದಷ್ಟೆ ಅಂಕೋಲಾ ತಾಲೂಕಿನ ಹಾರವಾಡ ಕಡಲತೀರದಲ್ಲಿಯೂ ಸಹ ಇದೇ ರೀತಿಯ ಘಟನೆ ಸಂಭವಿಸಿತ್ತು. ಸಮುದ್ರದಲ್ಲಿ ಹವಮಾನ ಬದಲಾವಣೆ ಆದ ಸಮಯದಲ್ಲಿ ಈ ರೀತಿಯಾಗಿ ಮೀನಿನ ರಾಶಿ ದಡಕ್ಕೆ ಬಂದು ಬಿಳುತ್ತದೆ ಎನ್ನಲಾಗಿದೆ.
Mass Fish Wash-Up Turns Karwar’s Devbag Beach into a Festive Scene
Karwar’s Devbag Beach witnessed a rare spectacle today as large shoals of fish washed ashore, drawing crowds of enthusiastic locals. Triggered by sudden and extreme changes in sea weather conditions, tarle and other small fish were carried to the shoreline in massive numbers.
Upon spotting the silver waves of fish along the coast, villagers rushed to the beach armed with nets, baskets, and whatever they could find to collect the bounty. Many simply picked the fish by hand and headed home, while others gathered sizeable hauls to sell in local markets.
The atmosphere turned lively from early morning, with the beach buzzing like a festival ground. Families and fishermen alike joined in, seizing the opportunity not just for home use but for commercial gain.
Interestingly, a similar event occurred just days ago at Harwada Beach in Ankola, where weather shifts at sea also drove masses of fish ashore. Experts note that such occurrences often coincide with natural changes in the ocean’s conditions, pushing fish closer to land.
ಇದನ್ನೂ ಓದಿ: Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು