ದುಬೈ: ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ, ದಾಖಲೆಯ 9ನೇ ಬಾರಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ತಿಲಕ್ ವರ್ಮಾ ಅವರ ಶ್ರೇಷ್ಠ, ಜವಾಬ್ದಾರಿಯುತ ಆಟ ಭಾರತಕ್ಕೆ ಗೆಲುವಿನ ತುತ್ತೂರಿ ಊದಿಸಿತು.

ಟಾಸ್ ಸೋತ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲಿ ದಿಟ್ಟವಾಗಿ ಆಡಿದರೂ, ಭಾರತೀಯ ಬೌಲರ್‌ಗಳ ನಿಖರ ದಾಳಿಗೆ 19.1 ಓವರ್‌ಗಳಲ್ಲಿ 146 ರನ್‌ಗಳಿಗೇ ಆಲೌಟ್ ಆಯಿತು. ಪಾಕಿಸ್ತಾನದ ಪರವಾಗಿ ಸಾಹಿಬ್ಜಾದ ಫರ್ಹಾನ್ 57 ರನ್ ಹಾಗೂ ಫಖರ್ ಜಮಾನ್ 46 ರನ್ ಗಳಿಸಿದರು. ಆದರೆ ಮಧ್ಯಭಾಗದಲ್ಲಿ ಭಾರತೀಯ ಸ್ಪಿನ್ನರ್‌ಗಳು ಪಾಕಿಸ್ತಾನದ ಬ್ಯಾಟರ್‌ಗಳನ್ನು ಸಂಕಷ್ಟಕ್ಕೆ ತಳ್ಳಿದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 30 ರನ್‌ಗೆ 4 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಕಿತ್ತು ಪಾಕಿಸ್ತಾನಕ್ಕೆ ಕಡಿವಾಣ ಹಾಕಿದರು.

147 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ತಗುಲಿತು. ಅಭಿಷೇಕ್ ಶರ್ಮ, ಶುಭಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ತ್ವರಿತವಾಗಿ ಔಟ್ ಆದರೂ, ತಿಲಕ್ ವರ್ಮಾ ಅದ್ಭುತ ಅರ್ಧಶತಕ ಸಿಡಿಸಿ ತಂಡವನ್ನು ಸಂಕಷ್ಟದಿಂದ ರಕ್ಷಿಸಿದರು. ಅವರಿಗೆ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಭರ್ಜರಿ ಸಾಥ್ ನೀಡಿದರು. ಅಂತಿಮವಾಗಿ ಭಾರತ 19.4 ಓವರ್‌ಗಳಲ್ಲಿ 150 ರನ್ ಗಳಿಸಿ 6 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತು. ತಿಲಕ್ ವರ್ಮಾ ಔಟ್ ಆಗದೆ 69 ರನ್ ಗಳಿಸಿ ಮ್ಯಾನ್ ಆಫ್ ದ ಮ್ಯಾಚ್ ಗೌರವ ಪಡೆದರು.

ಹ್ಯಾರಿಸ್ ರವೂಫ್‌ಗೆ ಬೂಮ್ರಾದ ತಕ್ಕ ಉತ್ತರ!
ಹಿಂದಿನ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದ ಪಾಕಿಸ್ತಾನದ ಬೌಲರ್ ಹ್ಯಾರಿಸ್ ರವೂಫ್ ವಿರುದ್ಧ ಬೂಮ್ರಾ ಮೈದಾನದಲ್ಲೇ ತಕ್ಕ ಪಾಠ ಕಲಿಸಿದರು. ಭರ್ಜರಿ ಯಾರ್ಕರ್ ಎಸೆದು ರವೂಫ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ ಬೂಮ್ರಾ, ಬಳಿಕ ವಿಮಾನ ಉರುಳುವಂತೆ ಸಿಗ್ನಲ್ ತೋರಿಸಿ ರವೂಫ್‌ನ ಅಹಂಕಾರ ಮುರಿದರು. ಈ ದೃಶ್ಯವನ್ನು ಕಂಡ ಭಾರತೀಯ ಅಭಿಮಾನಿಗಳು ಸಂಭ್ರಮದಿಂದ ಕೂಗಿ ಜಯಘೋಷ ಮಾಡಿದರು.

ಈ ಗೆಲುವಿನಿಂದ ಭಾರತ ಮತ್ತೊಮ್ಮೆ ಏಷ್ಯಾ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದು, ಪಾಕಿಸ್ತಾನದ ಮೇಲೆ ಭರ್ಜರಿ ವಿಜಯ ಸಾಧಿಸಿದೆ.

Dubai: In a high-voltage Asia Cup final between arch-rivals India and Pakistan, Team India registered a thumping victory to clinch the championship for a record ninth time. A stellar and responsible knock by Tilak Varma powered India to glory.

After losing the toss, Pakistan came out to bat first and started strongly. However, Indian bowlers struck back with precision, bundling out Pakistan for 146 runs in 19.1 overs. Sahibzada Farhan scored 57 runs, while Fakhar Zaman added 46 runs. But India’s spinners turned the tide in the middle overs, causing a collapse. Kuldeep Yadav was the star, taking 4 wickets for 30 runs, while Axar Patel, Varun Chakaravarthy, and Jasprit Bumrah claimed two wickets each, restricting Pakistan to a below-par total.

Chasing a target of 147, India faced early setbacks as Abhishek Sharma, Shubman Gill, and Suryakumar Yadav were dismissed cheaply. However, Tilak Varma’s brilliant half-century rescued India. Supported well by Sanju Samson and Shivam Dube, Varma guided the chase smoothly. India reached 150/4 in 19.4 overs, sealing a 6-wicket victory. Tilak Varma remained unbeaten on 69 runs and was named Man of the Match.

Bumrah’s fitting reply to Haris Rauf!
In a fiery moment, Jasprit Bumrah gave Pakistan pacer Haris Rauf a taste of his own medicine. Rauf, who had previously behaved rudely with Indian fans, was clean-bowled by a deadly yorker from Bumrah. After dismissing him, Bumrah celebrated with a “plane crash” gesture, symbolically bringing Rauf’s arrogance down, which sent Indian fans into a frenzy of cheers.

With this emphatic win, India once again stamped its dominance over Asia, defeating Pakistan in style and lifting the coveted Asia Cup trophy for the ninth time.

ಇದನ್ನೂ ಓದಿ: ಉತ್ತರ ಕನ್ನಡದ ಗುಂಡಿ ಜಗಳ! ಕುಂಡಿ ನೊಯಿಸಿಕೊಂಡರು ಯಾರು..?