ಸುದ್ದಿಬಿಂದು ಬ್ಯೂರೋ ವರದಿ(Suddibindu Digital News)
ಬೆಂಗಳೂರು:  ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕ ಮತ್ತು ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡುವ ಮ್ಯಾಥ್ಯೂನ ವಿರುದ್ಧ, ಮಹಿಳೆ ಅಶ್ಲೀಲ ವಿಡಿಯೋ ಕುರಿತಾಗಿ ಗಂಭೀರ ಆರೋಪ ಮಾಡಿದ್ದಾರೆ.

ದಹಿಕ ಶಿಕ್ಷಕ ಮ್ಯಾಥ್ಯೂ ತನ್ನ ಅಪರಿಚಿತ ಮಹಿಳೆಯರ ಮತ್ತು ಯುವತಿಯರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಸಂತ್ರಸ್ತೆಯ ಹೇಳಿಕೆ ಪ್ರಕಾರ, ಮ್ಯಾಥ್ಯೂನ ಬಳಿ ಸುಮಾರು 2,500 ಅಶ್ಲೀಲ ವಿಡಿಯೋಗಳು ಇದೆ ಎನ್ನಲಾಗಿದೆ. ಈ ವಿಡಿಯೋಗಳಲ್ಲಿ ಕೆಲವೊಂದು ಸಂತ್ರಸ್ತೆಯದೇ, ಇತರ ಯುವತಿಯರೊಂದಿಗೆ ಸಂಬಂಧಿಸಿದ ದೃಶ್ಯಗಳೂ ಕಂಡುಬಂದಿವೆ.

ಸಂತ್ರಸ್ತೆ ಈಗಾಗಲೇ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿನ ತಾಯಿ. ತನ್ನ ಮಗಳು ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ಪರಿಚಯವಾಯಿತು. ಬಳಿಕ ಇಬ್ಬರು ಕೆಲ ಕಾಲ ಜೊತೆ ವಾಸಿಸಿದ ಬಳಿಕ ಚರ್ಚ್‌ನಲ್ಲಿ ಮದುವೆಯಾಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೆ, ಮದುವೆಯ ನಂತರ ಮ್ಯಾಥ್ಯೂನ ನಿಜವಾದ ಸ್ವರೂಪ ಮತ್ತು ಅವನ ರಹಸ್ಯ ಚಟುವಟಿಕೆಗಳು ತಿಳಿದುಬಂದವು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

“ನಾನು ಒಂದು ರಾತ್ರಿ ಮಲಗಿದ್ದಾಗ, ನನ್ನ ಮೊಬೈಲ್ ಸಹಿತ ಮ್ಯಾಥ್ಯೂ ಓಡಿಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ಅವನ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷಿಗಳು ಇದ್ದವು,” ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೆ, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದಾಗ, ದೂರು ಸ್ವೀಕರಿಸಲಾಗಲಿಲ್ಲ. ಕೊನೆಗೆ ಮಹಿಳಾ ಆಯೋಗದ ಮೂಲಕ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಮಹಿಳಾ ಸುರಕ್ಷತೆ ಮತ್ತು ಖಾಸಗಿ ಡೇಟಾ ಹಕ್ಕುಗಳ ಕುರಿತು ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ.

ಇದನ್ನೂ ಓದಿ : ನಮ್ಮನ್ನ ಬದುಕಲು ಬಿಡಿ ಯೂಟ್ಯೂಬರ್ ಮುಕಳೆಪ್ಪ ದಂಪತಿ.