ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಹೊನ್ನಾವರದಲ್ಲಿ ನಡೆದ ಡಿವೈನ್ ಸ್ಟೆಪ್ಸ್ ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಎಚ್.ಆರ್. ಈಶಾನಿ ಹಿರೇಗುತ್ತಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ನೃತ್ಯ ವಿದೂಷಿ ನಯನಾ ಪ್ರಸನ್ನ ಪ್ರಭು ಅವರ ಬಳಿ ಭರತನಾಟ್ಯವನ್ನು ಕಲಿಯುತ್ತಿರುವ ಈಶಾನಿ, ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ 97% ಅಂಕಗಳನ್ನು ಪಡೆದು “ನಾದ ಶ್ರೀ ಕಲಾ ಕೇಂದ್ರ”ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಬಿ.ಜಿ.ಎಸ್ ಕೇಂದ್ರಿಯ ವಿದ್ಯಾಲಯ, ಮಿರ್ಜಾನದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆಯು, ಹಿರೇಗುತ್ತಿಯ ರಾಮದಾಸ ನಾಯಕ ಹಾಗೂ ಪವಿತ್ರ ದಂಪತಿಗಳ ಪುತ್ರಿಯಾಗಿದ್ದಾಳೆ, ಈಶಾನಿಯ ಸಾಧನೆಗೆ ಶಾಲಾ ಶಿಕ್ಷಕ ವೃಂದ ಹಾಗೂ ಅನೇಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.