ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸ್ಥಾಪನೆಯಾಗಲಿರುವ ಜೆಎಸ್‌ಡಬ್ಲ್ಯೂ-ಕೇಣಿ ಬಂದರು ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ. ಆಗಸ್ಟ್ 22 ಸಾರ್ವಜನಿಕ ಅಹವಾಲು ಆಲಿಕೆ ಸಭೆ ಜಿಲ್ಲಾಡಳಿತ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆಯಲಿದೆ. ಎಲ್ಲರ ಚಿತ್ರ ಈ ಕಾರ್ಯಕ್ರಮದತ್ತ ಇದ್ದು ಬಂದರು ಬೇಕು ಅಥವಾ ಬೇಡ ಎಂಬ ಚರ್ಚೆಗೆ ಅಂದು ಕೊನೆ ಹಾಡಲಾಗುವುದು.

ಈವರೆಗೂ ಬಂದರು ಬೇಡ ಎಂಬ ಧ್ವನಿ ಗಟ್ಟಿಯಾಗಿ ಕೇಳಿ ಬರುತ್ತಿತ್ತಾದರೂ, ಇನ್ನೊಂದೆಡೆ ಬಂದರು ಬೇಕು ಎಂಬ ‘ಸೈಲಂಟ್ ಮೆಜಾರಿಟಿಯ’ ಧ್ವನಿ ಈಗ ಕೇಳಲಾರಂಭಿಸಿದೆ. ಈ ಜನರ ಧ್ವನಿ ಕೇಳಿ ಬರುತ್ತಿಲ್ಲ. ಈ ಬಂದರು ನಿರ್ಮಾಣಕ್ಕೆ ಬೆಂಬಲವಾಗಿರುವವರ ಅನಿಸಿಕೆ ಕೂಡ ಪ್ರಮುಖವಾಗಿದ್ದು ಕೇಣಿಯಲ್ಲಿ ಸರ್ವಋತು ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಕಾರ್ಯಗಳು ಪ್ರಾರಂಭವಾದರೆ ಸಂಪೂರ್ಣ ಪ್ರದೇಶವು ಆರ್ಥಿಕ ಹಾಗೂ ಸಾಮಾಜಿಕವಾಗಿ ದೊಡ್ಡ ಬದಲಾವಣೆಯನ್ನು ಕಾಣಲಿದೆ ಎಂದು ಹಲವು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಈ ಬಂದರು ನಿರ್ಮಾಣವನ್ನು ಬೆಂಬಲಿಸುತ್ತಿರುವ ಸ್ಥಳೀಯ ಜನರ ಪ್ರಕಾರ ಮಹತ್ವಾಕಾಂಕ್ಷೆಯ ಈ ಯೋಜನೆ ಸಾಕಾರವಾದರೆ ನೇರ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಬಂದರಿನ ಕಾರ್ಯಾಚರಣೆಯೊಂದಿಗೆ ಸಾರಿಗೆ, ಲಾಜಿಸ್ಟಿಕ್ಸ್, ಗೋದಾಮು, ಹೋಟೆಲ್, ಲಾಜ್, ಇತರ ಉದ್ಯೋಗ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಶಾಶ್ವತ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಬಂದರಿನ ನಿರ್ಮಾಣದಿಂದ ಅಂಕೋಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ವೇಗ ಪಡೆಯಲಿದೆ. ಉತ್ತಮ ರಸ್ತೆ, ರೈಲು ಸಂಪರ್ಕ, ವಸತಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ವಿಸ್ತರಣೆ ಸಾಧ್ಯವಾಗಲಿದೆ. ಮಂಗಳೂರು ಬಂದರಿನ ಬೆಳವಣಿಗೆಯೊಂದಿಗೆ ಸುರತ್ಕಲ್ ಮತ್ತು ಪಣಂಬೂರು ಪ್ರದೇಶಗಳು ನಗರೀಕರಣ  ಕಂಡಂತೆ, ಕೇಣಿ ಬಂದರಿನಿಂದಲೂ ಇಂತಹ ಬೆಳವಣಿಗೆ ಸಾಧ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕಾ ಹೂಡಿಕೆಗಳಿಗೂ ಈ ಬಂದರು ದಾರಿತೋರುವ ಸಾಧ್ಯತೆ ಇದೆ.ಉಕ್ಕು, ಸಿಮೆಂಟ್, ಆಹಾರ ಸಂಸ್ಕರಣೆ, ಮೀನು ಸಂಸ್ಕರಣೆ, ರಾಸಾಯನಿಕ ಉತ್ಪನ್ನಗಳಂತಹ ಕೈಗಾರಿಕೆಗಳು ಬಂದರಿನ ಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಬೆಳೆಯುವ ಸಾಧ್ಯತೆಗಳಿವೆ. ಇದರಿಂದ ಜಿಲ್ಲೆ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳಬಹುದು.ಅದೇ ರೀತಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ, ಸುಂದರೆ ಕಡಲತೀರಗಳು, ಪರ್ವತ ಪ್ರದೇಶಗಳು ಭಾಗ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಬಹುದು. ಹಾಗೂ ಜಲಪಾತಗಳು ಇರುವ

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ, ಮಹಿಳೆಯರಿಗೆ ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತರೆ ಕೇಣಿ ಬಂದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಾರಿ ತೋರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ (ಬೆಲೇಕೇರಿ ಸಮೀಪ) ಯಲ್ಲಿ ಪ್ರಸ್ತಾಪಿತ ಜೆಎಸ್‌ಡಬ್ಲ್ಯೂ ಕೇಣಿ ಬಂದರು ಒಂದು ಪ್ರಮುಖ ಅಭಿವೃದ್ಧಿ ಯೋಜನೆಯಾಗಿದೆ. ಇದು ಸರ್ಕಾರದಿಂದ

2022-23ರ ಬಜೆಟ್‌ನಲ್ಲಿ 5015ಕೋಟಿ   ರೂಪಾಯಿಗಳ ಹೂಡಿಕೆಯೊಂದಿಗೆ ಆರಂಭಗೊಂಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ನಿರ್ಮಾಣವಾಗುತ್ತಿದೆ. ಈ ಬಂದರು ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಲಿದ್ದು, ಆಮದು-ರಫ್ತುಗಳನ್ನು ಸುಗಮಗೊಳಿಸಿ, ಇತರ ರಾಜ್ಯಗಳ ಬಂದರುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಇದರಿಂದ ರಾಜ್ಯದ ಆಮದು ವೆಚ್ಚ ಕಡಿಮೆಯಾಗಿ, ಸ್ಥಳೀಯ ಉದ್ಯಮಗಳು ಬೆಳೆಯಲು ಸಹಾಯವಾಗುತ್ತದೆ. ಸರ್ಕಾರದ ಈ ಯೋಜನೆಯು ಸಮಾಜ-ಸಾಂಸ್ಕೃತಿಕ ಅಭಿವೃದ್ಧಿಗೂ ಉತ್ತೇಜನ ನೀಡುತ್ತದೆ ಎಂದು ದಾಖಲೆಗಳು.ಸೂಚಿಸುತ್ತವೆ.

ಜೆಎಸ್‌ಡಬ್ಲ್ಯೂ ಕೇಣಿ ಬಂದರು ಸ್ಥಾಪನೆಯಾದರೆ ಸಂಪೂರ್ಣ ಪ್ರದೇಶದ ಅಭಿವೃದ್ಧಿ ಹೇಗೆ ಎಂಬ ಪ್ರಶ್ನೆಗೆ ತಜ್ಞರ ಉತ್ತರ ವೇನೆಂದರೆ ಈ ಬಂದರು ನಿರ್ಮಾಣವಾದರೆ ಅಂಕೋಲಾ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಪೂರ್ಣ ಪ್ರವೇಶವು ಬಹುಮುಖ ಅಭಿವೃದ್ಧಿ ಕಾಣಲಿದೆ. ಇದು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದ್ದು, ಸ್ಥಳೀಯರ ಜೀವನಮಟ್ಟವನ್ನು ಉನ್ನತೀಕರಿಸಲಿದೆ.

ಉದ್ಯೋಗ ಸೃಷ್ಟಿ
ಬಂದರು ನಿರ್ಮಾಣ ಮತ್ತು ಕಾರ್ಯಾಚರಣೆಯಿಂದ ನೇರವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ, ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮೂಲಕ ಅವರನ್ನು ಸಬಲೀಕರಣಗೊಳಿಸಲಾಗುತ್ತದೆ. ಉದಾಹರಣೆಗೆ, ಬಂದರು ಸಂಬಂಧಿತ ಉದ್ಯಮಗಳಾದ ಲಾಜಿಸ್ಟಿಕ್ಸ್, ಶಿಪ್ಪಿಂಗ್ ಮತ್ತು ಉತ್ಪಾದನಾ ಘಟಕಗಳಲ್ಲಿ ಹೊಸ ಉದ್ಯೋಗಗಳು ಉದ್ಭವಿಸಿ, ನಿರುದ್ಯೋಗ ದರ ಕಡಿಮೆಯಾಗುತ್ತದೆ. ದಾಖಲೆಯ ಪ್ರಕಾರ, ಇದು ಸ್ಥಳೀಯರಿಗೆ ಸ್ಥಿರ ಆದಾಯದ ಮೂಲವಾಗಿ ಪರಿವರ್ತನೆಯಾಗಲಿದೆ.

ಮೂಲಸೌಕರ್ಯ ಅಭಿವೃದ್ಧಿ
ಬಂದರು ಬಂದರೆ ರಸ್ತೆಗಳು, ಸೇತುವೆಗಳು ಮತ್ತು ರೈಲು ಮಾರ್ಗಗಳಂತಹ ಮೂಲಸೌಕರ್ಯಗಳು ಸುಧಾರಣೆ ಕಾಣಲಿವೆ. ಇದರಿಂದ ಕೇಣಿ ಮತ್ತು ಸುತ್ತಮುತ್ತಲ ಪ್ರದೇಶಗಳು ನಗರೀಕರಣಗೊಳ್ಳಲಿದ್ದು, ಹೊಸ ವಸತಿ ಕಾಲೋನಿಗಳು, ವಾಣಿಜ್ಯ ಕೇಂದ್ರಗಳು ಮತ್ತು ಉದ್ಯಮ ಪಾರ್ಕ್‌ಗಳು ನಿರ್ಮಾಣವಾಗಲಿವೆ. ಉದಾಹರಣೆಗೆ, ಮಂಗಳೂರು ಅಥವಾ ಗೋವಾ ಬಂದರುಗಳ ಸುತ್ತಮುತ್ತಲ ಪ್ರದೇಶಗಳಂತೆ, ಕೇಣಿಯೂ ಆಧುನಿಕ ನಗರವಾಗಿ ಬೆಳೆಯಬಹುದು. ಇದರಿಂದ ಸ್ಥಳೀಯರಿಗೆ ಉತ್ತಮ ಜೀವನ ಸೌಲಭ್ಯಗಳು ಲಭ್ಯವಾಗುತ್ತವೆ.

ಬಂದರು ಮೂಲಕ ಕೃಷಿ ಉತ್ಪನ್ನಗಳು ಮತ್ತು ಮೀನುಗಳ ರಫ್ತು ಸುಲಭವಾಗಿ, ರೈತರು ಮತ್ತು ಮೀನುಗಾರರಿಗೆ ಉತ್ತಮ ಬೆಲೆ ದೊರೆಯಲಿದೆ. ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, ಮೀನುಗಾರಿಕೆಯನ್ನು ಆಧುನೀಕರಣಗೊಳಿಸಿ, ಹೊಸ ತಂತ್ರಜ್ಞಾನಗಳೊಂದಿಗೆ ಸಮುದ್ರ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡಬಹುದು, ಉದಾಹರಣೆಗೆ, ಮೀನುಗಾರರಿಗೆ ಆಧುನಿಕ ಬೋಟ್‌ಗಳು ಮತ್ತು ಶೀತಲಗೃಹಗಳು ಲಭ್ಯವಾಗಿ, ಅವರ ಆದಾಯ ದುಪ್ಪಟ್ಟಾಗುತ್ತದೆ.

ಪರಿಸರ ಮತ್ತು ಸಮುದಾಯ ಅಭಿವೃದ್ಧಿ: ಈ ಯೋಜನೆ ಪರಿಸರ ಸ್ನೇಹಿಯಾಗಿದ್ದು, ಹಸಿರು ಬಂದರು ಎಂದು ಗುರುತಿಸಲಾಗಿದೆ. ಸ್ಥಳೀಯರ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಉದಾಹರಣೆಗೆ, ಹೊಸ ಆಸ್ಪತ್ರೆಗಳು ಮತ್ತು ಶಾಲೆಗಳ ನಿರ್ಮಾಣದಿಂದ ಸಮುದಾಯದ ಜೀವನಮಟ್ಟ ಉನ್ನತೀಕರಣಗೊಳ್ಳುತ್ತದೆ.

ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳು ಜಾರಿಗೊಳ್ಳಲಿವೆ.ಒಟ್ಟಾರೆಯಾಗಿ, ಜೆಎಸ್‌ಡಬ್ಲ್ಯೂ ಕೇರೆ ಬಂದರು ಸ್ಥಾಪನೆಯಾದರೆ ಅಂಕೋಲಾ ಮತ್ತು ಸುತ್ತಮುತ್ತಲ ಪ್ರದೇಶಗಳು ಆರ್ಥಿಕ ಕೇಂದ್ರವಾಗಿ ಬೆಳೆಯುತ್ತವೆ. ಸ್ಥಳೀಯರಿಗೆ ಸಮೃದ್ಧಿ ತರುತ್ತದೆ. ಆದರೆ, ಪರಿಸರ ಮತ್ತು ಸ್ಥಳೀಯರ ಹಿತಾಸಕ್ತಿಗಳನ್ನು ರಕ್ಷಿಸುವುದು ಆಗತ್ಯ ಇದು ಕರ್ನಾಟಕದ ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ.

ಮೀನುಗಾರಿಕೆಗೆ ತೊಂದರೆ ಇದೆಯೇ?
ತಜ್ಞರ ಪ್ರಕಾರ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕೇಣೆಯಲ್ಲಿ ಗ್ರೀನ್‌ ಫಿಲ್ಡ್ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಗೆ ನಾಶವಾಗುತ್ತದೆ ಎಂಬುದು ಪೂರ್ಣ ಸತ್ಯವಲ್ಲ, ಮೀನುಗಾರಿಕೆಯ ಅಭಿವೃದ್ಧಿಗೂ ವಾಣಿಜ್ಯ ಬಂದರು ಪೂರಕವಾಗಿದೆ. ಇಲ್ಲಿ ಸಿಗುವ ಮೀನುಗಳು ಪ್ರಾದೇಶಿಕ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಅವುಗಳಿಗೆ ಈವರೆಗೂ ಅಂತರಾಷ್ಟ್ರೀಯ ಮಾರುಕಟ್ಟೆ ಸಿಕ್ಕಿಲ್ಲ. ವಾಣಿಜ್ಯ ಬಂದರು ನಿರ್ಮಾಣದ ನಂತರ ಇಲ್ಲಿನ ಮೀನುಗಳ ಜೊತೆ ಮೀನುಗಳಿಂದ ಸಿದ್ಧಪಡಿಸಿದ ಉಪ್ಪಿನಕಾಯಿ ಸೇರಿ ಹಲವು ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆ ಸಿಗಲಿದೆ. ಪ್ರಪಂಚದ ನಾನಾ ಭಾಗಗಳಿಂದ ಬರುವ ಜನ ಇಲ್ಲಿನ ಮೀನುಗಳಿಗೆ ಮಾರು ಹೋಗುವುದರಲ್ಲಿ ಸಂಶಯವೇ ಇಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಸ್ಥಳೀಯರಿಗೆ ಅವಕಾಶಗಳೇನು..?
ಬಂದರಿನಿಂದಾಗಿ ಸ್ಥಳೀಯರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಸ್ಥಳೀಯರಿಗೆ ಅವರ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಹಲವಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸಿಗಲಿದ್ದು, ಹಡಗು ಮತ್ತು ಸರಕು ನಿರ್ವಹಣೆಗಾಗಿ ವಿವಿಧ ಉದ್ಯೋಗಾವಕಾಶಗಳು ದೊರೆಯಲಿದೆ. ಹಾಗೆ ಸಾಕಷ್ಟು ವ್ಯಾಪಾರ ಅವಕಾಶಗಳು ಸೃಷ್ಟಿಯಾಗಲಿವೆ.

ಮೀನುಗಾರರ ಹಿತ ಕಾಪಾಡಲು ಸರಕಾರ ಮಾಡಬೇಕಾದ್ದೇನು?
ಬಂದರು ಆಗಮನದಿಂದಾಗಿ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂಬುದು ಒಂದೆಡೆ ಮೀನುಗಾರರ ಹಿತ ಕಾಪಾಡಲು ಸರಕಾರ ಇಚ್ಛಾಶಕ್ತಿ ಪ್ರದಶಿಸಬೇಕಿದೆ. ಪರಿಸರ ರಕ್ಷಣೆ, ಜನರ ಆರೋಗ್ಯ ಹಾಗೂ ಜೀವನ ಮಟ್ಟ ಸುಧಾರಿಸಲು ವಿವಿಧ ಯೋಜನೆಗಳ ಜಾರಿಗೆ ತರುವದು, ಜೊತೆಗೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಸ್ಥಳೀಯರಿಗೆ ನೀಡುವುದರಿಂದ ಅವರಿಗೆ ಉದ್ಯೋಗಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವದು ಕಂಪನಿಯ ಜವಬ್ದಾರಿಯ ನೋಟ ಅರಿಯಬೇಕಿದೆ. ಶೈಕ್ಷಣಿಕ-ಆರೋಗ್ಯ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡುವದರ ಜೊತೆಗೆ ರಸ್ತೆ ಹಾಳಾಗದಂತೆ ನೋಡಿಕೊಳ್ಳುವದು, ಅರಣ್ಯ ನಾಶವಾಗದಂತೆ ಮುನ್ನೆಚ್ಚರಿಕೆವಹಿಸಬೇಕಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರ ಹಾಗೂ ಕಂಪನಿ ಮುಂದಾಗಬೇಕಿದೆ ಎಂಬುಂದು ಪ್ರಜ್ಞಾವಂತರ ಆಗ್ರಹವಾಗಿದೆ.

ಇದನ್ನೂ ಓದಿ: ಅಂಕೋಲಾ ತಾಲೂಕಿನ ಜೆಎಸ್‌ಡಬ್ಲ್ಯೂ ಕೇಣಿ ಬಂದರಿನ ಮಹತ್ವ