ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಶ್ರೀ ಕೃಷ್ಣೋತ್ಸವ ಸಮಿತಿ ಕಲ್ಲೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ 12 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಕಲ್ಲೇಶ್ವರದ ಗೋಪಾಲಕೃಷ್ಣ ಹಾಗೂ ದೇವಿ ದೇವಸ್ಥಾನದಲ್ಲಿ ನಡೆಸಲಾಯಿತು.

ಮಧ್ಯಾಹ್ನ ಅಂಗನವಾಡಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯಿತು. ಆರೋಗ್ಯ ಇಲಾಖೆಯ ದೀಪಾ ಹೆಗಡೆ ಕಲ್ಲೇಶ್ವರ ಪಿ.ಹೆಚ್.ಸಿ.ಓ ಉಪಕೇಂದ್ರ ಹಳವಳ್ಳಿ ಇವರಿಗೆ ಹಾಗೂ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ದೇಶಕ್ಕೆ ಮೂರನೇಯ ಸ್ಥಾನ ಗಳಿಸಿದ ಶ್ರೀನಿಧಿ ಎನ್ ಭಟ್ ರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಿದರು. ವಿಶ್ವದರ್ಶನ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾ.ಪಂ ಸದಸ್ಯ ಮೋಹನ ಪಟಗಾರ, ಹಿರಿಯ ಸಾಹಿತಿ ಆರ್.ಎಸ್ ಭಟ್ಟ ಕರಿಮನೆ, ಪ್ರೇರಣಾ ಸಂಸ್ಥೆ ಜೋಯಿಡಾದ ಸುಕನ್ಯಾ ದೇಸಾಯಿ ಉಪಸ್ಥಿತರಿದ್ದು ಮಾತನಾಡಿದರು.

ನಂತರದಲ್ಲಿ ಡಾ.ವಿಶ್ವೇಶ್ವರ ಭಟ್ಟರಿಂದ ವಿಶೇಷ ಉಪನ್ಯಾಸ ನಡೆಸಲಾಯಿತು. ಚಿಂತನಾ ಹೆಗಡೆ ಮಾಳಕೋಡ ಇವರಿಂದ ಯಕ್ಷ-ಗಾನ ವೈಭವ ನಡೆಸಲಾಯಿತು. ಪ್ರಕಾಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಭಟ್ಟ ಸ್ವಾಗತಿಸಿದರು. ಶೇಖರ್ ಗಾಂವಕರ್ ವಂದಿಸಿದರು. ಶ್ರೀನಿವಾಸ ಗಾಂವಕರ್ ಹಾಗೂ ರಾಘವೇಂದ್ರ ಹೆಗಡೆ ಸನ್ಮಾನ ಪತ್ರ ವಾಚಿಸಿದರು.

ಇದನ್ನೂ ಓದಿ:ಧರ್ಮಸ್ಥಳಕ್ಕೆ ಬಂದ ಬುರುಡೆ ದಾಸನ ರಹಸ್ಯ..!!