ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟ ದರ್ಶನ್ ಅವರನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ದರ್ಶನ್ಗೆ ನೀಡಲಾಗಿದ್ದ ಜಾಮೀನು ಅರ್ಜಿಯನ್ನ ಬೆಳಿಗ್ಗೆಯಷ್ಟೆ ರದ್ದುಗೊಳಿಸಿತ್ತು., ಇದೀಗ ನಟ ದರ್ಶನ್ ಅವರನ್ನ ಹೊಸಕೆರಹಳ್ಖಿಯ ಅಪಾರ್ಟ್ಮೆಟ್ನಲ್ಲಿ ಬಂಧಿಸಲಾಗಿದೆ.
ಇಂದು ಬೆಳಿಗ್ಗೆ ಸುಫ್ರೀಂ ಕೋರ್ಟ್ ದರ್ಶನ ಅವರ ಜಾಮೀನು ಅರ್ಜಿಯನ್ನ ರದ್ದು ಮಾಡಿತ್ತು, ಇದಾದ ಬಳಿಕ ಅವರ ಬಂಧನಕ್ಕಾಗಿ ಕೋರ್ಟ್ ಸೂಚನೆ ಕೂಡ ನೀಡಿತ್ತು. ಆದರೆ ಇಲ್ಲಯವರಗೆ ದರ್ಶನ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲಿ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನ ಕೇಳಿದ್ದರು ದರ್ಶನ್ ಎಲ್ಲಿದ್ದಾರೆ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲಿ
ಆದರೆ ದರ್ಶನ್ ಇಂದು ಬೆಳಿಗ್ಗೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿ, ಹೊಸರೆಹಳ್ಳಿಗೆ ತೆರಳಿದ್ದರು. ಕೆಲವೇ ಗಂಟೆಗಳ ಹಿಂದೆ ಅವರು ಮನೆಗೆ ವಾಪಸ್ ಆಗಿದ್ದು, ಹಿಂಬಾಗಿಲ ಮೂಲಕ ಪ್ರವೇಶಿಸಿ, ಹೊಸಕೆರಹಳ್ಖಿಯ ಪ್ಲಾಟ್ ನಂ.15ರ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದರು.
ಈ ನಡುವೆ, ಸುಪ್ರೀಂ ಕೋರ್ಟ್ ಆದೇಶ ಜಾರಿ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ನಟ ದರ್ಶನಗೆ ಬಂಧಿಸಿದ್ದಾರೆ.. ಬಂಧನದ ಕ್ಷಣಗಳಲ್ಲೇ ಸ್ಥಳಕ್ಕೆ ದರ್ಶನ್ ಅಭಿಮಾನಿಗಳು “ದರ್ಶನ್, ದರ್ಶನ್” ಎಂಬ ಘೋಷಣೆಗಳನ್ನು ಕೂಗಿದರು.
ಬಂಧನದ ನಂತರ ದರ್ಶನ್ ಅವರನ್ನು ಪೊಲೀಸ್ ಭದ್ರತೆಯಲ್ಲಿ ಅನ್ನಪೂರ್ಣೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯಲಿದ್ದಾರೆ.ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ದರ್ಶನ್ ಬಂಧನಕ್ಕಾಗಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.
ಇದನ್ನೂ ಓದಿ: ಬಟ್ಟೆ ತೊಳೆಯುವ ಸ್ಥಳದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ..!