ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಇತ್ತಿಚೇಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದು,‌ ಇದನ್ನು ಸಹಿಸದ ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟರು ಸಂತೋಷ್ ಲಾಡ್ ಸುಳ್ಳಿನ ಸರದಾರ ಎಂಬ ಹೇಳಿಕೆ ನೀಡಿ ತಮ್ಮ ನಾಲಿಗೆ ಮತ್ತು ಮೆದುಳಿಗೆ ಸಂಬಂಧವಿಲ್ಲ ಎಂಬುದನ್ನು ಧೃಡಪಡಿಸಿಕೊಂಡಿದ್ದಾರೆಂದು ಕಾಂಗ್ರೇಸ್ ಮುಖಂಡ ಮಂಜುನಾಥ ಎಲ್ ನಾಯ್ಕ ಶಾಸಕ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾಗಿ ಜಾರಿಗೆ ತಂದಿರುವ ಅನೇಕ ಯೋಜನೆಗಳು ಇಡೀ ದೇಶಕ್ಕೆ ರೋಲ್ ಮೊಡೆಲ್ ಆಗಿದೆ. ನೊಂದವರ ಪಾಲಿಗೆ ಇವರು ಬೆಳಕಾಗಿದ್ದಾರೆ. ಕಾಶ್ಮೀರದಲ್ಲಿ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗರಿಗೆ ಖುದ್ದಾಗಿ ಮಾತನಾಡಿ ಕ್ಷೇಮ ವಿಚಾರಿಸಿ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಬರುವಂತೆ ಮಾಡಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತ ಕನ್ನಡಿಗರ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳ ತಮ್ಮ ಸ್ವಂತ ಹಣವನ್ನು ವಿನಯೋಗಿಸಿ ಅವರನ್ನು ತಾಯ್ನಾಡಿಗೆ ಮರಳುವಂತೆ ಮಾಡಿದ್ದಾರೆ.

ಇದು ಕರ್ನಾಟಕದ ಮಟ್ಟಿಗೆ ಒಂದು ದೊಡ್ಡ ಮಾನವೀಯ ಹೆಜ್ಜೆ. ಬದರಿನಾಥ್ ಕೇದಾರನಾಥದಲ್ಲಿ ನಡೆದಂತ ದುರಂತದಲ್ಲಿ 13ದಿನಗಳ ಕಾರ್ಯಾಚರಣೆ ನಡೆಸಿ ನೆರವಿಗೆ ನಿಂತದ್ದಾರೆ. ರೈಲು ದುರಂತದಲ್ಲಿ ನೂರಾರು ಸಾವುಗಳ ಸಂದರ್ಭದಲ್ಲಿ ರಕ್ಷಣೆಗೆ ನಿಂತಿದ್ದಾರೆ. ಇವರು ಸ್ಥಾಪಿಸಿದ ಸಂತೋಷ್ ಲಾಡ್ ಪ್ರತಿಷ್ಠಾನವು ಗ್ರಾಮೀಣ ಸಮುದಾಯಗಳಿಗೆ ಅಗತ್ಯ ಸೌಲಭ್ಯಗಳು, ವೃತ್ತಿಪರ ತರಬೇತಿ ಮತ್ತು ಸುಸ್ಥಿರ ಅಭಿವೃದ್ಧಿ ಪರಿಹಾರಗಳೊಂದಿಗೆ ಸಬಲೀಕರಣಗೊಳಿಸುವ ಮೂಲಕ ತಳಮಟ್ಟದಲ್ಲಿ ಸಮಗ್ರ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಿದೆ.

ಸಂತೋಷ್ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಿಲುವು ನಡೆಗಳನ್ನು ಸೈದಾಂತಿಕವಾಗಿ ತಾರ್ಕಿಕವಾಗಿ ತೀಕ್ಷ್ಣ ಶಬ್ದಗಳಲ್ಲಿ ಟೀಕೆಗೆ ಒಳಪಡಿಸಿದ್ದಾರೆ ಮತ್ತು ಈಗಲೂ ಟೀಕಿಸುತ್ತಿದ್ದಾರೆ. ಇದರಿಂದ ಸಂತೋಷ ಲಾಡ್ ಅವರ ಜನಪ್ರಿಯತೆ ದಿನದಿಂದ‌ ದಿನಕ್ಕೆ ಹೆಚ್ಚುತ್ತಿದೆ.ಇದನ್ನೆಲ್ಲಾ ಕಂಡು ಇಂಗು ತಿಂದ ಮಂಗನಂತಾದ ಶಾಸಕ ದಿನಕರ್ ಶೆಟ್ಟಿ ಅವರು ಅದಕ್ಕೆ ಪ್ರತ್ಯುತ್ತರವನ್ನು ನೀಡಲು ಸಾಧ್ಯವಾಗದೆ ಇಂಥ ಬಾಲಶತನದ ಹೇಳಿಕೆಯನ್ನು ನೀಡಿ ತಾನೊಬ್ಬ ಪ್ರಭುದ್ಧತೆ ಇಲ್ಲದ ಶಾಸಕ ಎಂದು ತೋರಿಸಿಕೊಂಡಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಶಾಸಕ ದಿನಕರ್ ಶೆಟ್ಟಿ ಅವರು ” ಸಂತೋಷ್ ಲಾಡ್ ಸುಳ್ಳಿನ ಸರದಾರ ಅಧಿವೇಶನದಲ್ಲಿಯೇ ಸುಳ್ಳು ಹೇಳುತ್ತಾರೆ ನನ್ನ ಪ್ರಶ್ನೆಗೆ ಸುಳ್ಳು ಹೇಳಿದ್ದಾರೆ” ಎನ್ನುವ ಇವರು ಏನು ಸುಳ್ಳು ಹೇಳಿದ್ದಾರೆ ಎಂಬುದರ ಬಗ್ಗೆ ಮಾತನಾಡದೆ ತಮಗೆ ಪ್ರಬುದ್ಧತೆ ಇಲ್ಲ ಎಂಬುದನ್ನು ತೋರಿಸಿಕೊಂಡಿದ್ದಾರೆ. ಶಾಸಕ ದಿನಕರ್ ಶೆಟ್ಟರ ಪಕ್ಷದ ರಾಜ್ಯಾಧ್ಯಕ್ಷರೇ, ಸಂತೋಷ್ ಲಾಡ್ ಅವರು ಕರ್ನಾಟಕದ ಮುಖ್ಯಮಂತ್ರಿ ಯಾಗುವ ಸಾಮರ್ಥ್ಯ ಬಗ್ಗೆ ಮಾತನಾಡಿದ್ದಾರೆ.

ದೇಶದಲ್ಲಿ ಕನ್ನಡಿಗರು ಎಲ್ಲೇ ,ಅದು ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೂ.ಅವರನ್ನು ರಕ್ಷಿಸುವ ಕೆಲಸದ ರುವಾರಿ ಹೃದಯವಂತ ಸಂತೋಷ್ ಲಾಡ್ ಅವರು ಮಾಡಿದ್ದಾರೆ. ಬ್ರಿಟನ್ ನಲ್ಲಿ ಜಗತ್ತನ್ನೇ ಕನ್ವಿನ್ಸ್ ಮಾಡುವಂತ ಮಾತನಾಡಿ ನಮ್ಮ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದವರು.ಇಂಥವರನ್ನ ಟೀಕಿಸುವ ಭರದಲ್ಲಿ ಶಾಸಕ ದಿನಕರ ಶೆಟ್ಟಿರು ಇಂಗು ತಿಂದ ಮಂಗನಂತಾಗಿದ್ದಾರೆ.

ಇದನ್ನೂ ಓದಿ:ನಕಲಿ ಹೋರಾಟಗಾರ ಹೆಗಡೆ” ಗೂಗಲ್‌ನಲ್ಲಿ ಕ್ಷೇತ್ರದ ಬಗ್ಗೆ ತಿಳಿದು ಕೊಳ್ಳಲಿ