ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ್ ಅವರ ಹೆಸರನ್ನ  ಅನಾವಶ್ಯಕವಾಗಿ ಹಾಳು ಮಾಡುತ್ತಿರುವ ಅನಂತ್ ಮೂರ್ತಿ ಓರ್ವ ನಕಲಿ ಹೋರಾಟಗಾರ, ಕ್ಷೇತ್ರದ ಬಗ್ಗೆ ಗೂಗಲ್‌ನಲ್ಲಿ ತಿಳಿದುಕೊಳ್ಳಲಿ, ಎಂದು  ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಅವರು, “ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ನಡೆದ ಬೇಜವಾಬ್ದಾರಿ ಆಡಳಿತದ ಪರಿಣಾಮವೇ ಇಂದಿನ ಸ್ಥಿತಿ. ಅನಂತ್ ಮೂರ್ತಿಯವರಿಗೆ ಇದನ್ನು ತಿಳಿಯಲು ಇಷ್ಟು ವರ್ಷಗಳಾಯಿತೆಂಬುದು ಆಶ್ಚರ್ಯಕಾರಿ,ನಿಮ್ಮ‌ ಡೊಂಬರಾಟದ ಹೋರಾಟ ಜನರಿಗೆ ಗೊತ್ತಾಗಿದೆ.

ಭೀಮಣ್ಣ ನಾಯ್ಕ್  ಅವರು ಶಾಸಕರಾಗಿ ಎರಡು ವರ್ಷದ ಆಡಳಿತದಲ್ಲೇ ರಸ್ತೆಗಳು ಹಾಳು” ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದು, “ಇದು ನಿಮ್ಮ ಪಕ್ಷದ ಹಾಲಿ ಸಂಸದ ಹಾಗೂ ಮಾಜಿ ಶಾಸಕರ ಆಡಳಿತದ ಪ್ರತಿಫಲದಿಂದಾಗಿದೆ. ಇದಕ್ಕೆ ಹಾಲಿ ಶಾಸಕರ ತಪ್ಪಲ್ಲ,” ಎಂದು ಪ್ರತಿಪಾದಿಸಿದ್ದಾರೆ.
“ನಕಲಿ ಹೋರಾಟಗಾರರು ಕೆಲವು ಇಲಾಖೆಗಳ ಹೆಸರನ್ನು ಎತ್ತಿದ್ದಾರೆ. ಅವರು ಈ ಇಲಾಖೆಗಳಿಗೂ ಈಗಿನ ಶಾಸಕರ ಅವಧಿಯಲ್ಲಿ ನೀಡಿರುವ ಅನುದಾನಗಳ ಮಾಹಿತಿಯನ್ನು ತಿಳಿದುಕೊಳ್ಳಬೇಕು.”

“ವಾಹನ ಫಿಟ್ನೆಸ್, ಬಸ್‌ಗಳ ಇನ್ಶೂರೆನ್ಸ್, ದಾಖಲೆ ಪರಿಶೀಲನೆ” ಅದು ಶಾಸಕರ ಕೆಲಸವಲ್ಲ, ಅದನ್ನ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಡಬೇಕು. “ಶಾಸಕರು ಗ್ರಾಮೀಣ ಭಾಗಕ್ಕೆ ಸಂಪರ್ಕಕ್ಕೆ ಬಸ್ ಸೇವೆ ನೀಡಲು ಆದೇಶ ನೀಡಬಹುದು ಅಷ್ಟೇ.  ಬಿಜೆಪಿಯ ಹಿಂದಿನ ಆಡಳಿತದ ಪರಿಣಾಮವಾಗಿ 10 ಲಕ್ಷ ಕಿ.ಮೀ ಓಡಿದ ಬಸ್‌ಗಳು ಈ ದುಸ್ಥಿತಿಗೆ ಬಂದಿದೆ.. ನಾವು ಈಗ ಹೊಸ ಬಸ್‌ಗಳನ್ನು ಖರೀದಿಸುತ್ತಿದ್ದೇವೆ. ಈ ಹಿಂದಿನ ಅವಧಿಯಲ್ಲಿ ಒಂದು ಬಸ್ಸು ಕೂಡ ಖರೀದಿಸಿಲ್ಲ.

“ರಾಷ್ಟ್ರೀಯ ಹೆದ್ದಾರಿಗಳ ಕೆಟ್ಟ ಸ್ಥಿತಿಗೆ ಗುತ್ತಿಗೆದಾರರು ಮತ್ತು ಅಧಿಕಾರಿಗಳೇ ಹೊಣೆ. ಶಾಸಕರು ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಅನಂತರ ನೀವು ಬಂದು ಆ ಪಾತ್ರವನ್ನು ನಿಮ್ಮದಾಗಿಸಿಕೊಂಡು ‘ನಾನು ಮಾಡಿಸಿದೆ’ ಎಂಬ ಪ್ರಚಾರ ನಡೆಸುವುದು ನಗೆಪಾಟಲಿಗೆ ಕಾರಣವಾಗಿದೆ,” ಎಂದು ಪ್ರಸನ್ನ ಶೆಟ್ಟಿ ಕಿಡಿಕಾರಿದ್ದಾರೆ..

ಗ್ರಾಮ‌ ಪಂಚಾಯತ‌ಗೆ ಸ್ಪರ್ಧೆ‌ ಮಾಡಿ ಗೆದ್ದುಬರಲಿ

ಚಯನಾವಣೆಯ ಹುಚ್ಚಿಗೆ ಗುರಿಯಾಗುವ ಮೊದಲು, ಕನಿಷ್ಠ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧೆಗಿಳಿಸಲು ನಿಮ್ಮ ಪಕ್ಷದವರು ಧೈರ್ಯ ತೋರಿಸಲಿ,” 40 ವರ್ಷಗಳ ಆಡಳಿತ ಅನುಭವವಿರುವ ಭಿಮಣ್ಣ‌ ನಾಯ್ಕ್ ವಿರುದ್ಧ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಭೀಮಣ್ಣ ನಾಯ್ಕ್ ಅವರ ವಿರುದ್ಧ ಟೀಕೆ ಮಾಡುತ್ತಿರುವವರು ಮೊದಲು ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲಿ, ಎಂದು ಟೀಕಿಸಿದ ಶೆಟ್ಟಿ, “ಅನಂತ್ ಮೂರ್ತಿ ಎಂಬ ಸೆಲೆಕ್ಟೆಡ್ ಹೋರಾಟಗಾರರ ಮನರಂಜನೆ ಹೀಗೆ ಮುಂದುವರಿಯಲಿ” ಎಂದು ತೀಕ್ಷ್ಣವಾಗಿ  ವ್ಯಂಗ್ಯಮಾಡಿದ್ದಾರೆ.