ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ : ಕಳೆದ 6 ದಿನಗಳಿಂದ ಅನಾಮಿಕ ತೋರಿಸಿದ ಜಾಗದಲ್ಲಿ ಎಸ್​ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಧರ್ಮಸ್ಥಳ ಕೇಸ್​ಗೆ ಅತಿದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರುದಾರೆ ಸುಜಾತ ಭಟ್ ಪರ ವಕೀಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಅಸ್ತಿಪಂಚರದ ಜೊತೆ ಮಹಿಳೆಯ ಸೀರೆ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

6ನೇ ದಿನದ ಸ್ಥಳ ಪರಿಶೋಧನೆ ವೇಳೆ ಸಿಕ್ಕಿದ್ದು ಒಂದಲ್ಲ ಎರಡಲ್ಲಾ ಮೂರು ಅಸ್ಥಿಪಂಜರ ಸಿಕ್ಕಿವೆ ಎಂದು ದೂರುದಾರೆ ಸುಜಾತ ಭಟ್ ಪರ ವಕೀಲ ಮಂಜುನಾಥ್​ ಅವರು ಮಾಹಿತಿ ನೀಡಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ವಕೀಲ ಮಂಜುನಾಥ್ ಅವರು, ಪಾಯಿಂಟ್ 11ರ ನೂರು ಮೀಟರ್ ದೂರದಲ್ಲಿ 3 ಮಾನವ ಅಸ್ಥಿಪಂಜರ ಅವಶೇಷಗಳು ಲಭ್ಯವಾಗಿದೆ.

ನಿನ್ನೆ ಪರಿಶೋಧನೆಯು ಮೂಲ ಪಾಯಿಂಟ್ ನಂ. 11ರ ಬದಲು ಹೊಸ ಸ್ಥಳದಲ್ಲಿ ನಡೆಯಿತು. ಅನಾಮಿಕ ದೂರುದಾರನ ಸೂಚನೆಯ ಮೇರೆಗೆ ಎಸ್‌ಐಟಿ ಹೊಸ ಜಾಗ ತೋರಿಸಲು ಅವಕಾಶ ನೀಡಿದ್ದು, ಇದೇ ಪರಿಣಾಮವಾಗಿ ಶೋಧ ಕಾರ್ಯ ಯಶಸ್ವಿಯಾಗಿದೆ. ಎಸ್‌ಐಟಿ ಸೇರಿದಂತೆ ಶೋಧ ಕಾರ್ಯಾಚರಣೆ ನಡೆಸಿದ ಸಂಪೂರ್ಣ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲೂ ಶ್ಲಾಘನೆ ವ್ಯಕ್ತವಾಗಿದೆ..

ಇದನ್ನೂ ಓದಿ:ರಸ್ತೆಗಳ ಅವ್ಯವಸ್ಥೆ ವಿರುದ್ಧ ಆಗಸ್ಟ್ 7ರಂದು ಪಾದಯಾತ್ರೆ