ಸುದ್ದಿಬಿಂದು ಬ್ಯೂರೋ ವರದಿ (Bindu news network)
ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ನಡುಹಗಲಿನ ಹತ್ಯೆ ಪ್ರಕರಣ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.

ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಮನೋಜ್ ಅವರನ್ನು ದ್ವೇಷದ ಹಿನ್ನೆಲೆಯಲ್ಲಿ ಕಿಡ್ನಾಪ್ ಮಾಡಿ ಕೊಲೆಗೈದು ವರದಾ ನದಿಗೆ ಎಸೆದ ಘಟನೆ ಬಹಿರಂಗವಾಗಿದೆ.ಮೃತ ಮನೋಜ್ ಹಾಗೂ ಆರೋಪಿ ಶಿವರಾಜ್ ನಡುವೆ ಹೆಣ್ಣಿನ ವಿಚಾರಕ್ಕೆ ಹಳೆಯ ದ್ವೇಷ ಇತ್ತು ಎನ್ನಲಾಗಿದೆ. ಮದುವೆಗೆ ಮುನ್ನ ಶಿವರಾಜ್ ಪತ್ನಿ ಅಶ್ವಿನಿ ಹಾಗೂ ಮನೋಜ್ ನಡುವೆ ಲವ್ ಇರುವುದಾಗಿ ತಿಳಿದುಬಂದಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ನಿರಂತರ ಕಲಹ ನಡೆಯುತ್ತಿತ್ತು. ಇತ್ತೀಚೆಗೆ ಅಶ್ವಿನಿಯ ಅಶ್ಲೀಲ ವೀಡಿಯೋ ಹಂಚಿಕೊಂಡ ವಿಚಾರಕ್ಕೂ ಇಬ್ಬರ ನಡುವೆ ಗಲಾಟೆ ನಡೆದಿತ್ತು.

ಆಕ್ರೋಶಗೊಂಡ ಶಿವರಾಜ್, ನಿನ್ನೆ ಹುಟ್ಟುಹಬ್ಬದ ದಿನವೇ ಕೊಲೆ ಕೊಲೆ ಮಾಡುವುದಾಗಿ ಮನೋಜ್‌ಗೆ ಬೆದರಿಕೆ ಹಾಕಿದ್ದಾನೆ. ಆ ಬೆದರಿಕೆಯನ್ನು ನಿಜವಾಗಿಸುವಂತೆ, ಜುಲೈ 25ರಂದು ಲಕ್ಕಿಕೊಪ್ಪ ಕ್ರಾಸ್ ಬಳಿಯ ಡಾಬಾದಿಂದ ಮನೋಜ್ ಅವರನ್ನು ಅಪಹರಿಸಿ, ಕೊಲೆಗೈದು ವರದಾ ನದಿಗೆ ಶವ ಎಸೆದಿದ್ದಾರೆ.

ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಗಳು ಘಟನೆಯನ್ನು ಒಪ್ಪಿಕೊಂಡಿದ್ದು, ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  1. ಇದನ್ನೂ ಓದಿ:Comedy Khiladi/ ಕಾಮಿಡಿ ಕಿಲಾಡಿ ಖ್ಯಾತಿಯ ಯಲ್ಲಾಪುರದ ಚಂದ್ರಶೇಖರ ಸಿದ್ದಿ ಆತ್ಮಹತ್ಯೆ