ಸುದ್ದಿಬಿಂದು ಬ್ಯೂರೋ ವರಸಿ
ದಕ್ಷಿಣ ಕನ್ನಡ : ಧರ್ಮಸ್ಥಳ (Dharmasthala)ದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ತಿಳಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಶೇಷ ತನಿಖಾ ತಂಡ (SIT) ನೇತ್ರಾವತಿ (Netravati) ನದಿಯ ದಡದಲ್ಲಿ ಸ್ಥಳ ಮಹಜರು ಆರಂಭಿಸಿದೆ.
ಅನಾಮಿಕ (Anonymous) ವ್ಯಕ್ತಿಯನ್ನು ವಿಚಾರಣೆ ನಡೆಸಿದ SIT ತಂಡ, ಇಂದು ಸ್ಥಳಕ್ಕೆ ಕರೆತಂದು ಮಹಜರು ಕಾರ್ಯ ನಡೆಸಿದೆ. ಈ ವೇಳೆ ಶವ ಹೂತಿಟ್ಟ ಸ್ಥಳವನ್ನು ಅನಾಮಿಕ ಗುರುತಿಸಿದ್ದಾನೆ ಎಂದು ವರದಿ ಬಂದಿದೆ.
ನೇತ್ರಾವತಿ ದಡದಲ್ಲಿ ಬಿಗಿ ಭದ್ರತೆಯಲ್ಲಿ ಮಹಜರು
ಅನಾಮಿಕ ವ್ಯಕ್ತಿ ನೇತ್ರಾವತಿ ನದಿಯ ದಡದಲ್ಲಿ ತಲೆ ಬುರುಡೆಯನ್ನು (Skull) ಹೊರತೆಗೆದಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ SIT ತಂಡವು ಫೊರೆನ್ಸಿಕ್ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ಮಹಜರು ನಡೆಸುತ್ತಿದೆ.
ಮಾಸ್ಕ್ ಧರಿಸಿ ಬಂದ ಅನಾಮಿಕ
ಧರ್ಮಸ್ಥಳದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಜು 28) SIT ತಂಡ ಅನಾಮಿಕನನ್ನು ನೇತ್ರಾವತಿ ತೀರಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಕಾರ್ಯ ನಡೆಸಿದೆ.
ಗಿಡಗಂಟಿ ತೆರವು, ಶವ ಹೂತಿದ ಜಾಗ ಗುರುತು
ಪೊಲೀಸರ ಬಿಗಿ ಭದ್ರತೆಯಲ್ಲಿ ಮಹಜರು ನಡೆಯುತ್ತಿದ್ದು, ಅನಾಮಿಕ ವ್ಯಕ್ತಿ ಈಗಾಗಲೇ ಶವ ಹೂತಿದ ಪ್ರದೇಶವನ್ನು ಗುರುತಿಸಿದ್ದಾನೆ. ಆ ಸ್ಥಳವನ್ನು Tape ಹಾಕಿ ಪೊಲೀಸರು ಸುರಕ್ಷಿತಗೊಳಿಸಿದ್ದಾರೆ. ಈ ಸ್ಥಳವನ್ನು ಅಗೆದು ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ SIT ತಂಡ ದೂರುದಾರನ (Complainant) ವಿಚಾರಣೆ ನಡೆಸಿ ಹಲವು ಗಂಟೆಗಳ ಕಾಲ ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ. ದೂರುದಾರನ ಹೇಳಿಕೆಯ ಆಧಾರದ ಮೇಲೆ ಪ್ರಣವ್ ಮೊಹಂತಿ (Pranav Mohanty) ತಂಡ ತನಿಖೆ ಚುರುಕುಗೊಳಿಸಿದೆ.
ಬಿಳಿ-ಕೇಸರಿ ಬಣ್ಣದ ಮಾಸ್ಕ್ ಹಿಂದೆ ಮಹಾರಹಸ್ಯ!
ಅನಾಮಿಕ ವ್ಯಕ್ತಿ ಧರಿಸಿದ್ದ ಮಾಸ್ಕ್ನಲ್ಲಿ ಬಿಳಿ ಹಾಗೂ ಕೇಸರಿ ಬಣ್ಣದ ಗೆರೆಗಳು (Stripes) ಇದ್ದವು. ಸಾಮಾನ್ಯ ಮಾಸ್ಕ್ ಹಾಕಿದರೆ, AI (Artificial Intelligence) ತಂತ್ರಜ್ಞಾನವು ಮಾಸ್ಕ್ ಹಿಂದೆ ಇರುವ ವ್ಯಕ್ತಿಯ ಮುಖವನ್ನು ಅಂದಾಜು ಮಾಡಿ ಗುರುತಿಸಬಲ್ಲದು. ಆದರೆ ಬಿಳಿ ಹಾಗೂ ಕೇಸರಿ ಬಣ್ಣದ ಈ ವಿಶೇಷ ಮಾಸ್ಕ್ನ್ನು AI ತಂತ್ರಜ್ಞಾನವು ಡಿಕೋಡ್ (Decode) ಮಾಡಲು ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಪೊಲೀಸರು ಈ ರೀತಿಯ ಮಾಸ್ಕ್ ಧರಿಸಿ ಅನಾಮಿಕನನ್ನು ಸ್ಥಳಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.