ಬೆಂಗಳೂರು :ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು ಭಾರೀ ಬದಲಾವಣೆ ಕಂಡುಬಂದಿದ್ದು, ಇವುಗಳ ಬೆಲೆ ಗರಿಷ್ಠ ಮಟ್ಟ ತಲುಪಿವೆ. ಬುಧವಾರದ ವಹಿವಾಟಿನಲ್ಲಿ 24 ಕ್ಯಾರಟ್ ಅಪರಂಜಿ ಚಿನ್ನದ ದರ 10 ಗ್ರಾಂಗೆ ರೂ. 1,02,330 ರುಪಾಯಿ ತಲುಪಿದ್ದು, ಇದುವರೆಗೆ ದಾಖಲೆ ಬೆಲೆ ಏರಿದೆ. ಇತರ ಗ್ರಾಹಕರಿಗೆ 22 ಕ್ಯಾರಟ್ ಆಭರಣ ಚಿನ್ನದ ದರವೂ 10 ಗ್ರಾಂಗೆ ರೂ. 93,800 ರುಪಾಯಿ ತಲುಪಿದೆ.
ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಹತ್ತಿರದ ಒಂದು ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 100 ಗ್ರಾಂ ಬೆಳ್ಳಿ ದರ ರೂ. 11,900 ಆಗಿದೆ. ಅಂದರೆ, 10 ಗ್ರಾಂ ಬೆಳ್ಳಿಗೆ ಗ್ರಾಹಕರು ಈಗ ರೂ. 1,190 ಬೆಲೆ ನೀಡಬೇಕಾಗುತ್ತದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ (10 ಗ್ರಾಂ – 22 ಕ್ಯಾರಟ್):
ಬೆಂಗಳೂರು: ₹93,800, ಚೆನ್ನೈ: ₹93,800, ಮುಂಬೈ: ₹93,800, ದೆಹಲಿ: ₹93,950, ಕೋಲ್ಕತಾ: ₹93,800, ಕೇರಳ: ₹93,800, ಅಹ್ಮದಾಬಾದ್: ₹93,850 ದರದಲ್ಲಿ ಏರಿಕೆ ಉಂಟಾಗಿದೆ.
ಇದನ್ನೂ ಓದಿ : ಖಾರ್ಲೆಂಡ್ ಕಾಮಗಾರಿ “ಮಳೆ ಬಂತು ರಸ್ತೆ ಹೋಯತ್ತು” : ಅಧಿಕಾರಿ-ಗುತ್ತಿಗೆದಾರರ ಲೆಕ್ಕ ಚುಕ್ತಾ..!