ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಸೋಮವಾರ ಏಕಾದಶಿಯ ಮೌನ ವ್ರತಾಚರಣೆಯಲ್ಲಿದ್ದು, ಗೋಕರ್ಣ ಗ್ರಾಪಂ ಕೂಟದ ಸದ್ಭಕ್ತರು ಗುರು ಸೇವೆ ಗೈದು ಧನ್ಯತೆ ಪಡೆದರು.

೪೨ದಿನಗಳ ಕಠಿಣ ವ್ರತಾಚರಣೆಯಲ್ಲಿ ನಿರತರಾಗಿರುವ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯದ ೧೨ದಿನದ ಕಾರ್ಯಕ್ರಮದಲ್ಲಿ ಗೋಕರ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ತದಡಿ, ಬೇಲೆಕಾನ್-ಅಶೋಕೆ ಹಾಗೂ ಸಾಣಿಕಟ್ಟಾ ಗ್ರಾಮದ ಸಮಸ್ತ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಶ್ರೀಗಳು ಏಕಾದಶಿಯ ಮೌನ ವ್ರತಾಚರಣೆಯಲ್ಲಿದ್ದು, ಬಂದಂಹ ಎಲ್ಲ ಭಕ್ತರಿಗೆ ಆಶೀರ್ವಾದ ಮಾಡಿದರು.

ಈಶ್ವರ್ ಬೀರಪ್ಪ ನಾಯ್ಕ್ ದಂಪತಿ, ಕೇಶವ ಮಾಣಿ ನಾಯ್ಕ್ ದಂಪತಿ, ಮಾರುತಿ ತುಕಾರಾಮ ನಾಯ್ಕ್ ದಂಪತಿ, ಹನುಮಂತ ಸುಬ್ಬಾ ನಾಯ್ಕ್ ದಂಪತಿ ಹಾಗೂ ರಮಾನಂದ ನಾಗಪ್ಪ ನಾಯ್ಕ್ ದಂಪತಿ ವೈಯಕ್ತಿಕವಾಗಿ ಗುರುಪಾದುಕಾ ಪೂಜೆ ಸಲ್ಲಿಸಿದರು.  ಖಾರ್ವಿ ಸಮಾಜದ ಮುಖ್ಯಸ್ಥರಾದ ಸಂತೋಷ ಬೇತಾಳಕರ್, ಅಜಿತ್ ಮಹಾಲೆ ಹಾಗೂ ಮೋಹನ್ ಗುನಗಾ ಅವರು ಆಗಮಿಸಿ, ಶ್ರೀಗಳ ದರ್ಶನ ಪಡೆದು, ಫಲಮಂತ್ರಾಕ್ಷತೆ ಪಡೆದರು. ತದಡಿ ಗ್ರಾಮದ ಒಂಬತ್ತು ಮಂದಿ ಸಮಾಜ ಬಾಂಧವರು ಗುರು ಸೇವೆ ಸಲ್ಲಿಸಿದರು. ಗೋಕರ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿ.ಟಿ.ನಾಯ್ಕ್ ಅವರು ಸಿಹಿ ವಿತರಿಸಿದರು.ಮಧ್ಯಾಹ್ನ ನಡೆದ ಅನ್ನ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡ ಸದ್ಭಕ್ತರು ಪ್ರಸಾದ ಸ್ವೀಕರಿಸಿ, ಪುನೀತರಾದರು.

ಇದನ್ನೂ ಓದಿ: ಹಳಕಾರದಲ್ಲಿ ಈಜಲು ಹೋಗಿದ್ದ ಕರ್ಕಿಯ ಯುವಕ ಸಾವು