ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ ; ತಾಲೂಕಿನ ಹೆಗಡೆ ಚಿಟ್ಟಿಕಂಬಿಯಲ್ಲಿ ಕೋಳಿ ಅಂಕ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ‌ ಪಡೆದ ಪೊಲೀಸರು ದಾಳಿ ನಡೆಸಿದ್ದು, 15 ರಿಂದ 20 ಜನರು ಅಕ್ರಮವಾಗಿ ಕೋಳಿ ಅಂಕದಲ್ಲಿ ತೊಡಗಿದ್ದು, ದಾಳಿಯ ವೇಳೆ ಆರೋಪಿತರು ಪೊಲೀಸರು ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಕೋಳಿಯನ್ನ ವಶಕ್ಕೆ ಪಡೆದ ಕಷ್ಟಡಿಗೆ ಒಪ್ಪಿಸಿದ್ದಾರೆನ್ನಲಾಗಿದೆ.

ದಾಳಿಯಲ್ಲಿ ಪೊಲೀಸರು ಎಂಟು ಕೋಳಿಯನ್ನ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ಕಣ್ಣಿಗೆ ಕಾಣಿತ್ತಿರುವಾಗಲೆ ಪರಾರಿಯಾಗಿದ್ದಾರೆ. ಕೋಳಿ ಜೊತೆಯಲ್ಲಿ ನಾಲ್ಕು ದ್ವಿಚಕ್ರ ವಾಹನಗಳು ಸೀಜ್ ಮಾಡಲಾಗಿದ್ದು,ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಕುಮಟಾ ಠಾಣೆ ಮೂಲಗಳು ತಿಳಿಸಿವೆ. ಆದರೆ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗತ್ತಾರ ಇಲ್ಲ ಬಂಧನವಾಗಿರುವ ಕೋಳಿಗಳಿಗೆ ಜಾಮೀನು ನೀಡಿ ಬಿಡಿಸಿಕೊಂಡು ಹೋಗುವುದಕ್ಕಾದ್ದರೂ ಬರಲಿದ್ದಾರ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ : ನೇಣು ಬೀಗಿದುಕೊಂಡು PSI ಆತ್ಮಹತ್ಯೆ