ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಬುದ್ದಿಯೆಂಬ ಗುಹೆಯಲ್ಲಿ ತ್ಯಾಗದ ತುತ್ತ ತುದಿಯಿಂದ ಕಂಡರೆ ಭಗವಂತನ ದರ್ಶನವಾಗುತ್ತದೆ. ತ್ಯಾಗದಿಂದಲೇ ಭತವಂತನ ಸಾನಿಧ್ಯ ಪಡೆಯಬಹುದು ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದರ್ಗಾ ದೇವಾಲಯದಲ್ಲಿದ್ದ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ಹತ್ತನೇ ದಿನದ ಕಾರ್ಯಕ್ರಮದಲ್ಲಿ ಬರ್ಗಿ,ಕಿಮಾನಿ, ಬೆಟ್ಕುಳಿ ಗ್ರಾಪಂ ಕೂಟದ ಸದ್ಭಕ್ತರಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು, ತಮ್ಮ ಆಸೆ ಆಕಾಂಸೆಗಳನ್ನು ಈಡೇರಿಸಿಕೊಳ್ಳಲು ನಾನಾ ದೇವರಿಗೆ ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥ ಈಡೇರಿದ ಮೇಲೆ ದೇವರಿಗೆ ಸಲ್ಲಿಸ ಬೇಕಾದ ಹರಕೆಯನ್ನೆ ಮರೆತು ಬಿಡುತ್ತಾರೆ. ಮನುಷ್ಯ ಕೇವಲ ಕನಸು ಕಂಡರೆ ಪ್ರಯೋಜನವಿಲ್ಲ. ಆ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿ, ಕಠಿಣ ಪರಿಶ್ರಮದಿಂದಲೇ ಎತ್ತರದ ಸ್ಥಾನಕ್ಕೆ ಏರಬೇಕು.

ಯಶಸ್ಸು ಸುಮ್ಮನೆ ಸಿಗುವುದಿಲ್ಲ. ತ್ಯಾಗ ಮನೋಭಾವ ಕಠಿಣ ಪರಿಶ್ರಮದಿಂದಲೇ ಯಶಸ್ಸು ನಮ್ಮ ಕೈವಶವಾಗತ್ತೆ. ಅಂತೆಯೇ ಭಗವಂತನನ್ನು ಪಡೆಯಲು ನಮ್ಮ ಮನಸನ್ನು ಸ್ವಾಧೀನಗೊಳಿಸಬೇಕು. ಗುರುಗಳು ಹೇಳಿದ ನುಡಿಯಲ್ಲಿ ಯಾವುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂದು ಅರಿತುಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ನಾವು ಹಮ್ಮಿಕೊಂಡ ಚಾತುರ್ಮಾಸ್ಯದ ಸದುದ್ದೇಶ ಸಾರ್ಥಕವಾಗುತ್ತದೆ ಎಂದು ಶ್ರೀಗಳು ನುಡಿದರು.

ಚಾತುರ್ಮಾಸ್ಯ ವ್ರತಾಚಾರಣೆಯ 10ನೇ ದಿನದ ಕಾರ್ಯಕ್ರಮದಲ್ಲಿ ಬೆನಕಾ ಕನ್ಸ್ಲ್ಟನ್ಸಿಯ ಹೆಚ್.ಎಸ್. ನಾಯ್ಕ್ ಮತ್ತು ಕಲಭಾಗ ಗ್ರಾಪಂ ಸದಸ್ಯರಾದ ವಿರೂಪಾಕ್ಷ ನಾಯ್ಕರ ಕುಟುಂಬ ಶ್ರೀಗಳಿಗೆ ವಿಶೇಷ ಸೇವೆ ಸಲ್ಲಿಸಿದರು. ಬರ್ಗಿ ಕೂಟ, ಬೆಟ್ಕುಳಿ ಮತ್ತು ಕಿಮಾನಿ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಹೆರವಟ್ಟಾದ ಮಹಾಬಲೇಶ್ವರ್ ಜಟ್ಟಪ್ಪ ನಾಯ್ಕ್ ದಂಪತಿ ,ನಾಗೇಶ ಬೀರಪ್ಪ ನಾಯ್ಕ್ ದಂಪತಿ ಅಳ್ವೆಕೋಡಿ, ತುಕಾರಾಮ ನಾರಾಯಣ ನಾಯ್ಕ್ ದಂಪತಿ ಬೆಟ್ಕುಳಿ ಇವರು ವಯಕ್ತಿಕವಾಗಿ ಗುರುಪಾದುಕಾ ಪೂಜೆ ಸಲ್ಲಿಸಿದರು.

ತಾಲೂಕಾ ಪಠ್ಯ ಪುಸ್ತಕ ಉಸ್ತುವಾರಿ ಮಂಜುನಾಥ ಎನ್ ನಾಯಕ್ , ಪಟಗಾರ ಸಮಾಜದ 18 ಹಳ್ಳಿಯ ಯಜಮಾನರಾದ ವೆಂಕಟ್ರಮಣ ಪಟಗಾರ, ಕಾಂಗ್ರೆಸ್ ಮುಖಂಡ ಪ್ರದೀಪ್ ನಾಯಕ , ಆರ್ ಎಫ್ ಒ ಎಸ್.ಟಿ.ಪಟಗಾರ ಅವರು ಆಗಮಿಸಿ ಶ್ರೀಗಳ ದರ್ಶನ ಪಡೆದು ಫಲಮಂತ್ರಾಕ್ಷತೆ ಪಡೆದರು. ಕಿಮಾನಿ ಹಾಗೂ ಊರಕೇರಿ ಗ್ರಾಮದ ಸಮಾಜ ಬಾಂದವರು ಗುರು ಸೇವೆಯನ್ನು ಸಲ್ಲಿಸಿದರು. ಬಳಿಕ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿ, ಹರಸಿದರು. ಮಧ್ಯಾಹ್ನ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿ ಧನ್ಯತೆ ಪಡೆದರು.

ಇದನ್ನೂ ಓದಿ:ಬಾಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ : ಅವಿರೋಧ ಆಯ್ಕೆ