ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:ತಾಲ್ಲೂಕಿನ ಮುರುಡೇಶ್ವರದಲ್ಲಿ ಭಾರೀ ಗಾಳಿ-ಮಳೆಯ ಪರಿಣಾಮವಾಗಿ ಬೃಹತ್ ಮರವೊಂದು ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಉರುಳಿದ್ದು, ಮರ ಬಿಳುತ್ತಿರುವ ವೇಳೆ ಚಲಿಸುತ್ತಿದ್ದ ಬೈಕ್ ಸವಾರನೋರ್ವ ಬೈಕ್ ನಿಂದ. ಹಾರಿಕೊಂಡು ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌‌

ಮುರಡೇಶ್ವರದ ಗುಮ್ಮನ ಹಕ್ಲು ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆ ಸಮೀಪದ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಳಿ-ಮಳೆಯದಿಂದಾಗಿ ಹೆದ್ದಾರಿ ಪಕ್ಕದ ಮರವೊಂದು ಭೀಕರವಾಗಿ ನೆಲಕಚ್ಚಿದ್ದು, ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಮರ ಬೀಳುವದನ್ನು ಕ್ಷಣದಲ್ಲಿ ಗಮನಿಸಿದ ಟ್ಯಾಂಕರ್ ಹಿಂದೆ ಬರುತ್ತಿದ್ದ ಬೈಕ್ ಸವಾರರು ತಕ್ಷಣ ಬ್ರೇಕ್ ಹಾಕಿದ್ದು, ತೀವ್ರ ಅಪಾಯ ತಪ್ಪಿಸಲು ಸಾಧ್ಯವಾಗಿದೆ.ಘಟನೆ ನಂತರ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲಕಾಲ ವಾಹನಗಳ ಸಂಚಾರ ಬಂದ್ ಮಾಡುವಂತಾಗಿತ್ತು. ಘಟನಾ ಸ್ಥಳಕ್ಕೆ ಎನ್‌ಎಚ್‌ಎಐ ಹಾಗೂ ಇತರ ಇಲಾಖೆ ಅಧಿಕಾರಿಗಳು ತಕ್ಷಣ ತೆರಳಿ ಮರವನ್ನು ತೆರವುಗೊಳಿಸಿದ್ದಾರೆ..

ಇದನ್ನೂ ಓದಿ:-ಸೊರಬದಲ್ಲಿ ಭಾರೀ ಗಾಳಿ ಮಳೆ : ಕಾರ ಮೇಲೆ ಬಿದ್ದ ಮರ