ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಳೆದ ಒಂದು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ ನಾರಾಯಣ ಅವರನ್ನ ಬೆಂಗಳೂರಿಗೆ ವರ್ಗಾಣೆ ಮಾಡಿ ಸರಕಾರ ಆದೇಶಿಸಿದೆ.
ಎಂ ನಾರಾಯಣ ಅವರ ಜಾಗಕ್ಕೆ .ದೀಪನ್ ಎಂಎನ್, ಐಪಿಎಸ್ (ಕೆಎನ್ 2019) ಅವರನ್ನ ನಿಯೋಜನೆ ಮಾಡಲಾಗಿದೆ. ಎಂ ನಾರಾಯಣ ರಾಜ್ಯದ 34 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿಸೆ.ಎಂ ನಾರಾಯಣ ಅವರು ಉತ್ತರ ಕನ್ನಡಕ್ಕೆ ಎಸ್ಪಿ ಆಗಿ ನೇಮಕವಾಗಿ ಬಂದಾಗಿನಿಂದ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು.ಜಿಲ್ಲೆಯಲ್ಲಿ ನಡೆಯುತ್ತಿದ್ದ ಓಸಿ,ಮಟ್ಕಾ, ಸೇರಿದಂತೆ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು,ಜೊತೆ ಅನೇಕ ಪ್ರಕರಣಗಳನ್ನ ಬೇಧಿಸಿದ್ದರು..