ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮದಲ್ಲಿ ರೇಬೀಸ್ ಕಾಯಿಲೆಗೆ ತುತ್ತಾಗಿದ್ದ ಹೋರಿಯೊಂದು ಸಿಕ್ಕ ಸಿಕ್ಕವರಿಗೆ ತಿವಿದ ಘಟನೆ ನಡೆದಿದ್ದು,ಓರ್ವ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಗಿದೆ.
ಸೈರೋಬಾ ಪಟೇ ಎಂಬ ವ್ಯಕ್ತಿಗೆ ಹೋರಿಯೊಂದು ತಿವಿದ ಪರಿಣಾಮವಾಗಿ ತೀವ್ರ ಗಾಯವಾಗಿದ್ದು, ತಕ್ಷಣವೇ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೇ ರೇಬಿಸ್ ಪೀಡಿತ ಹೋರಿ ಇನ್ನೊಂದು ಆಕಳು ಕರುವಿಗೆ ತಿವಿದಿದ್ದು, ಅದಕ್ಕೂ ಗಾಯವಾಗಿದೆ. ಹೋರಿ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದೆ.ನಿಯಂತ್ರಣವಿಲ್ಲದಂತೆ ಕುಣಿಯುತ್ತಾ ಓಡಾಡುತ್ತಿದ್ದಂತೆ ಕಂಡು ಬಂದಿದೆ. ಹಾರವಾಡದ ನಾಗರಿಕರು ತಕ್ಷಣ ಪಶು ವೈದ್ಯಕೀಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ.ಪಶು ವೈದ್ಯ ಡಾ. ಪ್ರಶಾಂತ್ ಅವರ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಹೋರಿಯನ್ನು ಹಿಡಿಯಲಾಗಿದೆ,
ಹೋರಿಗೆ ರೇಬೀಸ್ ಸೋಂಕು ತೀವ್ರವಾಗಿದೆ ಎಂಬುದು ದೃಢಪಟ್ಟಿದೆ. ಪರಿಣಾಮವಾಗಿ, ಹೋರಿಗೆ ತಕ್ಷಣವೇ ಇಂಜೆಕ್ಷನ್ ನೀಡಲಾಗಿದ್ದು, ಗ್ರಾಮದಲ್ಲಿ ಮತ್ತಷ್ಟು ಅನಾಹುತವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಈ ಘಟನೆಯಿಂದ ಹಾರವಾಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ:85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ