ಈ‌ ಪೋಟೋದಲ್ಲಿ ಇರೋರು ಬೇರೆಯಾರು ಅಲ್ಲ, ಪಿ. ಎನ್. ಪಟಗಾರ್ ಮೇಷ್ಟ್ರು ಇವರ ಬಗ್ಗೆ ಬರೆಯಬೇಕು ಅಂದ್ರೆ ಅದು ಸಾಮಾನ್ಯವಾದುದಲ್ಲ ಹಾಗಂತ ಅಷ್ಟು ದೊಡ್ಡ ಮನುಷ್ಯರ ಅಂತಾ ಕೇಳಬಹುದು ಬಟ್ ಹಾಗಲ್ಲ ಇವರು ಅತ್ಯಂತ ಸರಳ ವ್ಯಕ್ತಿಯಾಗಿದ್ದು ನಿಷ್ಕಲ್ಮಶ ಪ್ರೀತಿ ಕರುಣೆ ಉದಾರತೆ ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸಮಾಜ ಸೇವೆಗೆ ನನ್ನದೊಂದು ದೊಡ್ಡ ಸಲಾಂ ಕಣ್ರೀ..🙏

ವೃತ್ತಿಯಲ್ಲಿ ಮೇಷ್ಟ್ರಾಗಿದ್ದು ಈಗ ನಿವೃತ್ತಿಹೊಂದಿರುವರು. ಹಾಗೆ ಪ್ರವೃತ್ತಿಯಲ್ಲಿ ತಮ್ಮದೇ ಸ್ವಂತ ಬಿಡುವಿಲ್ಲದೆ ಉದ್ಯೋಗ. ಜೊತೆಗೆ ಮನೆ ಸಂಸಾರ ಗಿಡ ಮರ ಬಳ್ಳಿ ಹೂವು ಹೀಗೆ ಚಿಕ್ಕ ಚೊಕ್ಕ ಸುಂದರ ಬದುಕನ್ನು ಕಟ್ಟಿಕೊಂಡಿರವ ಪುಸ್ತಕ ಪ್ರಿಯರಿವರು.ಪುಸ್ತಕ ಓದುವುದರೊಂದಿಗೆ ಕೆಲವೊಂದು ಪ್ರಬಂಧ ಮಂಡಿಸುವುದು ಕೂಡ ಇವರ ಹವ್ಯಾಸಗಳಲ್ಲಿ ಒಂದಾಗಿದೆ.

ಇನ್ನೂ ಇವರ ದಿನಚರಿ ವಿಷಯಕ್ಕೆ ಬಂದರೆ ಬೆಳಿಗ್ಗೆ ನಸುಕಿನಲ್ಲಿ ಎದ್ದು ಒಂದು ಲೋಟ ನೀರು ಕುಡಿದು ಒಂದು ರೌಂಡ್ ವಾಕಿಂಗ್ ಹೋಗ್ ಬರೋರು ಹಾಗೆ ಹೋಗಿ ಬರುವಾಗ ಎಡ_ಬಲ ಗಡೆಯಲ್ಲಿ ಕಲ್ಲು ಮುಳ್ಳು ಏನೇ ಕಂಡ್ರೂ ಎತ್ತಿ ಬಿಸಾಕಿ ಎಲ್ಲರಾ ನಡಿಗೆಗೂ ಅನುವು ಮಾಡಿ ಕೊಡುವವರು. ಹೀಗೆ ನಿತ್ಯದ ಕೆಲಸದಲ್ಲಿ ಬ್ಯೂಸಿ ಮನೆಯಲ್ಲಿ ಏನ್ ಬೇಕು ಏನ್ ಬೇಡ ಎಲ್ಲವನ್ನೂ ವಿಚಾರಿಸಿ ಬೆಳಿಗ್ಗೆಯ ತಿಂಡಿಯಿಂದ ಹಿಡಿದು ಹೆಂಡತಿ ಮಗಳನ್ನ ಶಾಲೆ ಕಾಲೇಜಿಗೆ ಕಳಿಸುವವರೆಗೂ ಅವರದೇ ಜವಾಬ್ದಾರಿ.

ಅಷ್ಟೇ ಸಾಲದು ಬಿಡುವಿಲ್ಲದೆ ಕೆಲಸದಲ್ಲಿಯೂ ಕೂಡ ಯಾವುದೇ ಫಲಾಪೇಕ್ಷೆ ಇಲ್ಲದೆ ನಮ್ಮ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬಸ್ ನಿಲ್ದಾಣ ಇಷ್ಟೊಂದು ಸ್ವಚ್ಛವಾಗಿರಲು ಕಾರಣ ನಾನು ಕೂಡ ಎಷ್ಟೋ ದಿನಗಳಿಂದ ಹುಡುಕುತ್ತಿರುವ ಕಾಣದ ಕೈ ಬೇರೆ ಯಾರೂ ಅಲ್ರೀ ನಮ್ಮ ನಿಮ್ಮೆಲ್ಲರ ನಡುವೆ ಇರುವ ಅತ್ಯಂತ ಸರಳ ಸಜ್ಜನರು @ಪಟಗಾರ್_ಮೇಷ್ಟ್ರು
ಪಿ ಎನ್ ಪಟಗಾರ್ ಸರ್ ಕಣ್ರೀ..

ಹೌದು ಆಶ್ಚರ್ಯ ಅಂದ್ರೂ ಬಟ್ ನಿಜಾನೇ.
ಇವರ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿ ಎಷ್ಟೆಷ್ಟೋ ವೇದಿಕೆಯನ್ನ ಹಂಚಿಕೊಂಡಿದ್ದು ಸನ್ಮಾನ ಸ್ವೀಕರಿಸಿರುವ ಸರಳ ಸಜ್ಜನರಲ್ಲಿ ಇವರು ಒಬ್ಬರಾಗಿರುವರು.ಹೀಗೆ ಇವರು ಯಾವುದೇ ಫಲಾಫೇಕ್ಷೆ ಇಲ್ಲದೆ ಮಾಡುವ ಸಮಾಜಿಕ ಸೇವೆಯು ಸಮಾಜಕ್ಕೆ ಒಂದು ಮಾದರಿಯಂತಾಗಲಿ.

ಮುಂದಿನ ಬದುಕು ಶುಭಕರವಾಗಲಿ.. 😊🙏 ಕು. ಜೀ

ಇದನ್ನೂ ಓದಿ:-ಮಳೆಯಿಂದ ಮನೆ ಕಳೆದುಕೊಂಡ ಕುಟುಂಬ : ಮಾನವೀಯತೆ ಮೆರೆದ ಅನಂತಮೂರ್ತಿ ಹೆಗಡೆ