ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:, ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ನಾಲ್ಕು ತಾಲೂಕುಗಳಲ್ಲಿನ ಶಾಲೆ ಹಾಗೂ ಅಂಗನವಾಡಿಗಳಿಗೆ ಜುಲೈ 4ರಂದು (ಶುಕ್ರವಾರ) ರಜೆ ಘೋಷಿಸಲಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕುಗಳ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ನೀಡಿರುವಂತೆ ಜಿಲ್ಲಾಡಳಿತದಿಂದ ಆದೇಶ ಮಾಡಲಾಡಲಾಗಿದೆ. ಈ ನಿರ್ಧಾರವನ್ನು ತಹಶೀಲ್ದಾರ ಶಿರಸಿ ರವರ ಮೌಖಿಕ ಕೋರಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪತ್ರದ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ರಜೆ‌ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:-ಆಷಾಢ ಏಕಾದಶಿ ಹಿನ್ನೆಲೆ: ಶ್ರೀ ಕ್ಷೇತ್ರ ಸಿದ್ದರದಲ್ಲಿ ಅಖಂಡ ನಾಮಸಂಕೀರ್ತನೆ