ಉತ್ತರ ಕನ್ನಡ ಜಿಲ್ಲೆಯ ಕೇಣಿ ಗ್ರೀನ್ ಫೀಲ್ಡ್ ಬಂದರು ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಕರ್ನಾಟಕ ಜಲಸಾರಿಗೆ ಮಂಡಳಿ (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ) ಸರ್ಕಾರದ ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್‌ ಫೀಲ್ಡ್ ಬಂದರನ್ನು ಅಭಿವೃದ್ಧಿ ಪಡಿಸಲು ಜೆಎಸ್‌ಡಬ್ಲೂ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡಿದೆ.

ಸದ್ಯಕ್ಕೆ ಈ ಯೋಜನೆಯು (ಪ್ರಾಜೆಕ್ಟ್) ಸರ್ವೇ, ಅಧ್ಯಯನದ ಹಂತದಲ್ಲಿದೆ. ಇದರ ನಂತರ ಪರಿಶೀಲನೆ ಪ್ರಕಾರ ಪ್ರಾಜೆಕ್ಟ್ ಸೂಕ್ತವೆಂದು ಕಂಡು ಬಂದಲ್ಲಿ ಮುಂದೆ ಕರ್ನಾಟಕ ಸರ್ಕಾರದವತಿಯಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಅಹವಾಲು ಸಭೆ (Public Hearing) ನಡೆಸಲಾಗುವುದು. ಈ ಸಭೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜಕರು ತಮ್ಮ ಯಾವುದೇ ಅಹವಾಲುಗಳು ಮತ್ತು ಬೇಡಿಕೆಗಳನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರ ಅಹವಾಲು ಸಭೆ (Public Hearing)ಯ ಬಳಿಕವೇ ಪ್ರಾಜೆಕ್ಟ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು.

ಆರಂಭಿಕ ಅಧ್ಯಯನದ ಪ್ರಕಾರ ಈ ಯೋಜನೆಗೆ ಸಮುದ್ರದಲ್ಲಿ 450 ರಿಂದ 600 ಎಕರೆ ಭೂಮಿಯನ್ನು ಪುನಃಸ್ಥಾಪನೆಗಾಗಿ (Reclamation) ವ್ಯವಸ್ಥೆಗೊಳಿಸಲಾಗುವುದು.ಇದಕ್ಕಾಗಿ ಸಾರ್ವಜನಿಕರ ಯಾವುದೇ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ರಸ್ತೆ ಮತ್ತು ರೈಲು ಸಂಪರ್ಕಕ್ಕಾಗಿ ಅಂದಾಜು 150 ಎಕರೆ ಜಮೀನಿನ ಆವಶ್ಯಕತೆ ಇದ್ದು,ಈ ಜಾಗವನ್ನು ಮಾತ್ರವೇ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಸರಕಾರದ ನಿಯಮಾವಳಿ ಪ್ರಕಾರ ಭೂಮಿ ಹಾಗೂ ಮನೆ ಕಳಕೊಂಡವರಿಗೆ ಪರಿಹಾರ ನೀಡಲಾಗುವುದು.

ವಿಡಿಯೋ ಲಿಂಕ್:-

ಬಂದರು ನಿರ್ಮಾಣದ‌ ಬಳಿಕವೂ ಮೀನುಗಾರಿಕೆಗೆ ಅವಕಾಶ
ಈ ಯೋಜನೆಗೆ ಮೀನುಗಾರರ ಮನೆಗಳಾಗಲಿ ಅಥವಾ ಕೇಣಿ ಕಡಲ ತೀರವನ್ನಾಗಲಿ ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಅಲ್ಲದೇ ಬಂದರು ನಿರ್ಮಾಣದ ಬಳಿಕವೂ ಬಂದರು ಚಟುವಟಿಕೆ ಇರದ ಜಾಗವನ್ನು ಮೀನುಗಾರರು ಎಂದಿನಂತೆ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ನಡೆಸಲು ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳಿಗಾಗಿ ಬಂದರು ಪ್ರದೇಶದಲ್ಲಿ ಓಡಾಡಲು ಯಾವುದೇ ಅಭ್ಯಂತರವಿರುವುದಿಲ್ಲ, ಅಲೆ ತಡೆಗೋಡೆ (Break Water) ನಿರ್ಮಾಣದಿಂದಾಗಿ ಮೀನುಗಾರರ ಸುರಕ್ಷತೆಯ ದೃಷ್ಟಿಯಿಂದ ಮೀನುಗಾರರು ಸರ್ವಋತುಗಳಲ್ಲೂ ಆಶ್ರಯ ಪಡೆದುಕೊಳ್ಳಬಹುದಾಗಿದೆ.

ಫೇಸ್ ಬುಕ್ ಲಿಂಕ್:
https://www.facebook.com/share/195xiQXXF6/
ನನಸಾಗಲಿದೆ ದಶಕದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ‌ದ ಕನಸು
ಮುಂದಿನ ದಿನಗಳಲ್ಲಿ ಬರಲಿರುವ ಬಂದರು ಸಂಪರ್ಕದ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಉತ್ತಮ ಸಂಪರ್ಕವೇರ್ಪಡುವುದರಿಂದ ಈ ರಸ್ತೆಗಳು ಸ್ಥಳೀಯರ ಬಳಕೆಗೂ ಅನುಕೂಲಕರವಾಗಲಿದೆ.ಈ ಕೇಣಿ ಬಂದರು ನಿರ್ಮಾಣದಿಂದ ಜನರ ಬಹುಕಾಲದ ಬೇಡಿಕೆಗಳಲ್ಲೊಂದಾದ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಸಾಧ್ಯತೆಗೊಳ್ಳಲು ಸಹಕಾರಿಯಾಗಲಿದೆ. ಈ ಯೋಜನೆಯಿಂದ ಸಾರ್ವಜನಿಕರ ಸಂಪರ್ಕದ ಜೊತೆಗೆ ಅಂಕೋಲಾ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿವೆ.

ಸುತ್ತಮುತ್ತಲಿನ ಹಳ್ಳಿಗಳಿಗೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ
ಮುಂದಿನ ದಿನಗಳಲ್ಲಿ ನಮ್ಮ ಕಂಪನಿಯ ವತಿಯಿಂದ ಕೇಣಿ, ಬಾವಿಕೆರೆ, ಅಂಕೋಲಾ, ಅಲಗೇರಿ, ಶಿರಕುಳಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (Corporate Social Responsibility) ಕಾರ್ಯಗಳ ಮೂಲಕ ಮೀನುಗಾರರು ಹಾಗೂ ಸ್ಥಳೀಯರ ಒಳಿತಿಗಾಗಿ ಕಾರ್ಯ ನಿರ್ವಹಿಸಲಾಗುವುದು ಮತ್ತು ಈ ಪ್ರದೇಶದ ಅಭಿವೃದ್ಧಿಗಾಗಿ ಒತ್ತು ನೀಡಲಾಗುವುದು.

ಇನ್ ಸ್ಟಾಗ್ರಾಮ್ ಲಿಂಕ್ :-
https://www.instagram.com/jswkeniport/profilecal
ವ್ಯಾಪಾರ ವಹಿವಾಟುಗಳಿಗೆ ಹೇರಳ ಅವಕಾಶ
ಒಂದು ವೇಳೆ ಈ ಯೋಜನೆ ಜಾರಿಯಾದರೆ ಸ್ಥಳೀಯರಿಗೆ ಶೈಕ್ಷಣಿಕ ಆರ್ಹತೆಗನುಗುಣವಾಗಿ ಉದ್ಯೋಗಾವಕಾಶಗಳು ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೇರಳವಾದ ಅವಕಾಶಗಳಿವೆ. ಆದರೆ, ಈ ಪ್ರದೇಶ ಈ ಯೋಜನೆಗೆ ಎಷ್ಟು ಸೂಕ್ತ ಎಂಬುವುದನ್ನು ತಿಳಿಯುವುದಕ್ಕಾಗಿ ಕಾರ್ಯಸಾಧ್ಯತೆಯ ಪೂರ್ವ ಸರ್ವೆ ಅತ್ಯಗತ್ಯ. ಈ ಸರ್ವೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲವೆಂದು ಈ ಮೂಲಕ ಪ್ರಮಾಣೀಕರಿಸುತ್ತೇವೆ. ಆದ್ದರಿಂದ ಈ ಸರ್ವೆಗೆ ಸಾರ್ವಜನಿಕರೆಲ್ಲರೂ ಪೂರ್ಣ ಪ್ರಮಾಣದಿಂದ ಸಮ್ಮತಿಸಿ ಸಹಕರಿಸುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಂಪೆನಿಯ

ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ರೇಶ್ಮಾ ಉಳ್ಳಾಲ್ ಇವರ ಈಮೇಲ್ ಐಡಿ reshma.ullal@jsw.in
ಮೊಬೈಲ್ ನಂಬರ್: 7411061555 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಭರಮಪ್ಪ ಕುಂಟಗೇರಿ ಯೋಜನಾ ಮುಖ್ಯಸ್ಥರು
ಜೆಎಸ್‌ಡಬ್ಲ್ಯು ಕೇಣಿ ಪೋರ್ಟ್