ಸುದ್ದಿಬಿಂದು ಬ್ಯೂರೋ ವರದಿ

ಶಿರಸಿ: ತಾಲೂಕಿನ ಮತ್ತಿಘಟ್ಟ ಹತ್ತಿರದ ಜೋಗನ ಹಕ್ಕಲು ಫಾಲ್ಸ್ ನೋಡಲು ಗೆಳೆಯನೊಂದಿಗೆ ಹೋಗಿದ್ದ ಯುವಕ ನೋರ್ವ ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟು ವೇಳೆ ಕಾಲು ಜಾರಿ ಬಿದ್ದು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾದ ಘಟನೆ ನಡೆದಿದೆ.

ತಾಲೂಕಿನ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಪವನ್(24) ಎಲೆಕ್ಟ್ರಿಷಿಯನ್ ಎನ್ನಲಾಗಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದ ಸಹೋದರ ಪ್ರವೀಣ್ ಜೋಗಿ ಕಣ್ಮರೆಯಾದ ತನ್ನ ತಮ್ಮನನ್ನು ಹುಡುಕಿಕೊಡುವಂತೆ ದೂರು ನೀಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿರುವ ಯುವಕನಿಗಾಗಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ಮುಂದುವರೆಸಿದ್ದಾರೆ. ಈಜು ತಜ್ಞರೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾ ದರ್ಶನ