ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿಮೀ ಭಾಗ ಹಾಗೂ ಅರಣ್ಯ ಪ್ರದೇಶವನ್ನು ಒಳಗೊಂಡು ಒಟ್ಟು 5959.322 ಹೆಕ್ಟೇರ್ ವಿಸ್ತೀರ್ಣವನ್ನು ಅರಣ್ಯ,ಜೀವಪರಿಸ್ಥಿತಿ ಮತ್ತು ಇಲಾಖೆಯ ಅಡಿಯಲ್ಲಿ “ಅಪ್ಸರಕೊಂಡಾ-ಮುಗಲಿ “ಕಡಲ ವನ್ಯಜೀವಿ ಧಾಮ”ವೆಂದು(wildlife) ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಈ ಸಾಗರ ವನ್ಯಜೀವಿ ಧಾಮದಲ್ಲಿ ಪಾರಂಪರಿಕಾ ಮೀನುಗಾರಿಕೆ ಹಾಗೂ ಮೀನುಗಾರರ ಬೋಟುಗಳ ಪ್ರವೇಶದ ಮೇಲೆ ಯಾವುದೇ ನಿರ್ಬಂಧವಿಲ್ಲ. ಅದೇ ರೀತಿ ಅಲ್ಲಿರುವ ಜನರ ಈಗಿರುವ ಹಕ್ಕುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ.
ಹೊನ್ನಾವರ ಸಮುದ್ರ ತೀರದ 8.21 ಕಿಮೀ ಭಾಗ, ಅದರಲ್ಲಿ 6 ಕಿಮೀ ಸಮುದ್ರ ಭಾಗ ಹಾಗೂ 835 ಹೆಕ್ಟೇರ್ ಅರಣ್ಯ ಪ್ರದೇಶವನ್ನು “ಅಪ್ಸರಕೊಂಡಾ-ಮುಗಲಿ ಕಡಲ ತೀರವನ್ನ ವನ್ಯಜೀವಿ ಅಭಯಾರಣ್ಯ”ವೆಂದು ಘೋಷಿಸಲಾಗಿದೆ.ಜಲಚರ ಜೀವಿಗಳ ರಕ್ಷಣೆಯೇ ಇದರ ಮುಖ್ಯ ಉದ್ದೇಶವಾಗಿದ್ದು, ಈ ಹೆಜ್ಜೆ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ