ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ವಾಹನ ಸವಾರರು ಆಕ್ರೋಶ ಹೊರ ಹಾಕುತ್ತಲೆ ಇರುತ್ತಾರೆ. ಆದರೆ ಇದೀಗ ಬೆಲೆ ಏರಿಕೆ ನಡುವೆ ಇದೀಗ ಪೆಟೋಲ್ ಬಂಕ್ಗಳಲ್ಲಿ ವಂಚನೆ ಕೂಡ ನಡೆಸಲಾಗುತ್ತಿದೆ. ವಾಹನ ಸವಾರರಿಗೆ ಪೆಟ್ರೋಲ್, ಡಿಸೇಲ್ ವಿತರಣೆಯಲ್ಲಿ ವಂಚನೆ ಮಾಡುತ್ತಿದ್ದ ಕುಮಟಾ ತಾಲೂಕಿನ ಎರಡು ಪೆಟ್ರೋಲ್ ಬಂಕ್ ಸೀಜ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮಿರ್ಜಾನದಿಂದ ಹೊನ್ನಾವರಕ್ಕೆ ಹೋಗುವಾಗು ಸಿಗುವ ಎರಡು ಪೆಟ್ರೋಲ್ ಬಂಕ್ಗಳಲ್ಲಿ ವಾಹನ ಸವಾರರಿಗೆ ವಂಚನೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಆ ಎರಡು ಪೆಟ್ರೋಲ್ ಬಂಕ್ ಸೀಜ್ ಮಾಡಿದ್ದಾರೆನ್ನಲಾಗಿದೆ. ಈ ಎರಡು ಪೆಟ್ರೋಲ್ ಬಂಕ್ನಲ್ಲಿ ವಾಹನ ಸವಾರರು ಒಂದು ನೂರು ರೂಪಾಯಿ ಪೆಟ್ರೋಲ್ ಅಥವಾ ಡಿಸೇಲ್ಗಳನ್ನ ವಾಹನಕ್ಕೆ ತುಂಬಿಸಿಕೊಂಡರೆ ಗ್ರಾಹಕರಿಗೆ ಕೇವಲ 80 ರೂಪಾಯಿಯ ಪೆಟ್ರೋಲ್ ಮಾತ್ರ ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಅನೇಕ ದಿನಗಳ ಕಾಲ ಪೆಟ್ರೋಲ್, ಡಿಸೇಲ್ ವಿತರಣೆಯಲ್ಲಿ ವ್ಯತ್ಯಾಸ ಆಗುತ್ತಿರುವ ಬಗ್ಗೆ ತಿಳಿದ ವಾಹನ ಸವಾರರೊಬ್ಬರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆಯಲ್ಲಿ ಪೆಟ್ರೋಲ್ ಡಿಸೇಲ್ ವಿತರಣೆಯಲ್ಲಿ ವ್ಯತ್ಯಾಸ ಆಗುತ್ತಿರುವುದು ಕಂಡು ಬಂದಿದೆ.ಹೀಗಾಗಿ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕುಮಟಾ ತಾಲೂಕಿನ ಎರಡು ಪೆಟ್ರೋಲ್ ಬಂಕ್ಗಳನ್ನ ಸೀಜ್ ಮಾಡಿದ್ದಾರೆ.
ಈ ಪೆಟ್ರೋಲ್ ಬಂಕ್ ಮಾಲೀಕರು ಬಂಕ್ ಆರಂಭವಾದ ದಿನಗಳಿಂದ ವಾಹನ ಸವಾರರಿಂದ ಅದೇಷ್ಟು ವಂಚನೆ ಮಾಡಿರಬಹುದು ಎಂಬುದನ್ನ ಒಮ್ಮೆ ಉಹಿಸಲೇ ಬೇಕಾಗಿದೆ. ಇನ್ನೂ ಬಂಕ್ ಸೀಜ್ ಆದ ಬಳಿಕ ತಮ್ಮ ಕಳ್ಳಾಟ್ಟ ಗ್ರಾಹಕರಿಗೆ ತಿಳಿಯಬಾರದು ಎಂದು ಪೆಟ್ರೋಲ್ ಬಂಕ್ ಎದುರು ದೊಡ್ಡದಾಗಿ ಇಂಜಿನ್ ದುರಸ್ಥಿಯಲ್ಲಿದೆ ವಾಹನ ಸವಾರರು ಸಹಕರಿಸಬೇಕು ಎಂಬ ನಾಮಫಲಕ ಅಳವಡಿಸಿಕೊಂಡಿದ್ದಾರೆನ್ನಲಾಗಿದೆ.
ಸೀಜ್ ಆದ ಎರಡು ಪೆಟ್ರೋಲ್ ಬಂಕ್ಗಳಲ್ಲಿ ಈಗ ಕುಮಟಾದಿಂದ ಹೊನ್ನಾವರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಒಂದು ಪೆಟ್ರೋಲ್ ಬಂಕ್ ಒಂದೇರಡು ದಿನಗಳ ಹಿಂದೆ ಓಪನ್ ಆಗಿದ್ದು, ಮಿರ್ಜಾನದಿಂದ ಕುಮಟಾ ಮಾರ್ಗ ಮಧ್ಯ ಸಿಗುವ ಬಂಕ್ನಲ್ಲಿ ಇನ್ನೂ ಇಂಜಿನ್ ದುರಸ್ಥಿಯಲ್ಲಿದೆ ಎನ್ನುವ ನಾಮಫಲಕ ಕಾಣಸಿಗುತ್ತಿದೆ. ವಾಹನ ಸವಾರರು ಇನ್ನ ಮೇಲೆ ಪೆಟ್ರೋಲ್, ಡಿಸೇಲ್ ಹಾಕುವ ಮುನ್ನ ಹತ್ತುಬಾರಿ ಗಮನ ನೀಡಬೇಕಿದೆ. ಇಲ್ಕದೆ ಹೋದರೆ ನಿತ್ಯವೂ ಈ ವಂಚನೆ ಮುಂದುವರೆಯುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ