ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಉಗ್ರರ ಅಡಗು ತಾಣದ ಮೇಲೆ ಏರ ಸ್ಟ್ರೈಕ್ ಮಾಡಿರುವುದನ್ನ ಸ್ವಾಗತ್ತಿಸುತ್ತೇನೆ.ನಮ್ಮ ದೇಶವನ್ನ ಕೆಣಕಿದವರಿಗೆ ಇದು ತಕ್ಕ ಪಾಠ,ದೇಶದ ವಿಚಾರದಲ್ಲಿ ಯಾವತ್ತು ನಮ್ಮ ಬೆಂಬಲ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ.
ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿರುವ ದಾಳಿ ನೋಡಿದಾಗ ಮನಸ್ಸಿಗೆ ನೋವಾಗಿತ್ತು.ನಮ್ಮ ಅನೇಕ ಸಹೋದರಿಯರ ಸಿಂಧೂರವನ್ನ ಉಗ್ರರು ಅಳಸಿದ್ದರು. ಆದರೆ ಇಂದು ಅಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಲಾಗಿದೆ. ಯಾವುದೇ ದೇಶ ಆದರೂ ನಮ್ಮಗೆ ತೊಂದರೆ ನೀಡಲು ಬಂದರೆ ಉತ್ತರ ಕೊಡಲು ನಾವು ಸಿದ್ದರಿದ್ದೆವೆ ಎನ್ನುವುದನ್ನ ತೋರಿಸಿಕೊಡಲಾಗಿದೆ.
ನಾವು ಯಾರ ಸುದ್ದಿಗೂ ಹೋಗಲ್ಲ,ಅನಾವಶ್ಯಕ್ಕವಾಗಿ ಅವರಾಗಿಯೇ ನಮ್ಮ ಸುದ್ದಿಗೆ ಬಂದರೆ ಸುಮ್ಮನಿರಲ್ಲ ಎನ್ನುವ ಇತಿಹಾಸ ಇದೆ. ದೇಶದ ವಿಚಾರದಲ್ಲಿ ನಮ್ಮ ಸಂಪೂರ್ಣವಾದ ಬೆಂಬಲ ಇದೆ.ಇದರಲ್ಲಿ ಯಾವುದೆ ವ್ಯತ್ಯಾಸ ಇಲ್ಲ.ನಿನ್ನೆ ನಡೆದ ದಾಳಿ ಏನಿದೆ ಇದು ಎಚ್ಚರಿಕೆಯಾಗಿದೆ.ದೇಶದ ಭದ್ರತೆ ವಿಚಾರದಲ್ಲಿ ನಾವು ಸದಾ ಇದ್ದೇವೆ ಎಂದಿದ್ದಾರೆ.
ಇದನ್ನೂ ಓದಿ