ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆ ಗ್ಯಾರೆಂಟಿ,ಇದು ಕಾಂಗ್ರೆಸ್ ಗ್ಯಾರಂಟಿ ಎಂದು ಪ್ರತಿ ಪಕ್ಷದ ನಾಯಕ ಆರ್‌ ಅಶೋಕ ಕಾಂಗ್ರೇಸ್ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಕೂಡ ಆಗಿರುವ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆಗಾಗಿ ಕಾರಿಂಜ‌‌ಕ್ಕೆ‌ ಭೇಟಿ ನೀಡಿದ ಸಮಯದಲ್ಲಿ ಹತ್ಯೆಗೆ ಸಂಬಂಧಿಸಿ ಆರ್ ಅಶೋಕ್ ಹೇಳಿಕೆ ನೀಡಿದ್ದು, ಸುಹಾಸ್ ಹತ್ಯೆಯಲ್ಲಿ ಪಿಎಫ್ ಐ, ಕೆಎಫ್ ಡಿ ಕೈವಾಡ ಇದ್ದು, ಜಿಹಾದಿ ಬ್ರದರ್ಸ್ ಈ ಕೊಲೆಗೆ ಕಾರಣರಾಗಿದ್ದಾರೆ. ಬಂಧನಕ್ಕೆ ಒಂದು ಟೀಂ ರೆಡಿ ಮಾಡ್ತಾರೆ,ಅರೆಸ್ಟ್ ಆಗೋಕೆ ಇನ್ನೊಂದ ಟೀಂ‌‌ ರೆಡಿ ಮಾಡತ್ತಾರೆ,‌‌‌ ಸುಹಾಸ್ ಗೆ ಕಾದಿದೆ ಎಂಬ ಮೆಸೇಜ್ ಹರಿದಾಡುತ್ತಿತ್ತು. ಆದರೂ ಪೊಲೀಸ್‌‌ ಈ ಬಗ್ಗೆ ಪೊಲೀಸ‌ರು ಕಾಳಸಿ ಮಾಡಿಲ್ಲ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸ್ಪಷ್ಟವಾಗಿ ವೈಫಲ್ಯವಾಗಿದೆ ಎಂದು ಆರೋಪಿಸಿದರು.

ಕರ್ನಾಟಕ ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಧೈರ್ಯ ಇಲ್ಲ, ಎನ್‌‌ಐಎ ಯಿಂದ ಮೂಲ ಕಾರಣ ಪತ್ತೆ ಹಚ್ಚುವಂತಾಗಬೇಕು.‌ಸಿದ್ದರಾಮಯ್ಯ ಹೇಳಿಕೆಗಳೇ ಈ ಕೊಲೆಗಳಿಗೆ ಕಾರಣವಾಗಿದೆ.ಕ್ಯಾಬಿನೆಟ್ ಗೆ ತಂದು ಪಿಎಫ್ ಐ ಕಾರ್ಯಕರ್ತರ ಬಿಡುಗಡೆ ಮಾಡಿದ್ದಾರೆ. ಪಾಕ್ ಜಿಂದಾಬಾದ್, ಭಯೋತ್ಪಾದನೆ ಚಟುವಟಿಕೆ ಜಾಸ್ತಿಯಾಗಿದೆ. ಮಂಗಳೂರಿನಲ್ಲಿ ಎನ್ಐಎ ಸೆಂಟರ್ ಗಾಗಿ ಕೇಂದ್ರಕ್ಕೆ ಪತ್ರ ಬರೀತೇವೆ,ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದಿದ್ದಾರೆ.

ಇದನ್ನೂ ಓದಿ