ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ದೊಡ್ಡ ತಿರುವುಗಳನ್ನು ತರುತ್ತದೆ. ರಾಜ್ಯದ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ನಿರೀಕ್ಷಿಸುತ್ತಿದ್ದ ಕ್ಷಣವು ಕೊನೆಗೂ ಬಂದಿದೆ. ಕರ್ನಾಟಕ ಪರೀಕ್ಷಾ ಮಂಡಳಿ ನಾಳೆ ಎಸ್ಎಸ್ಎಲ್ಸಿ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗಳು ರಾಜ್ಯದಾದ್ಯಂತ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದವು. ಈ ಬಾರಿ ರಾಜ್ಯದಾದ್ಯಂತ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕರ್ನಾಟಕ ಪರೀಕ್ಷಾ ಮಂಡಳಿ ನಾಳೆ ಫಲಿತಾಂಶ ಪ್ರಕಟಿಸುತ್ತೇವೆ ಎಂದು ತಿಳಿಸಿದೆ.
2025 ರ ಎಸ್ಎಸ್ಎಲ್ಸಿ ಪರೀಕ್ಷೆ-1 ನ ಪರೀಕ್ಷೆಗಳು 21-03-2025 ರಿಂದ 04-04-2025 ರವರೆಗೆ ನಡೆದವು. ಎಲ್ಲ ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವೂ ಪೂರ್ಣಗೊಂಡಿದೆ. ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ 02-05-2025 ರಂದು ಬೆಳಿಗ್ಗೆ 11:30ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ.
ಶಿಕ್ಷಣ ಸಚಿವರು ನಾಳೆ ಬೆಳಿಗ್ಗೆ 11:30ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ನಂತರ ಮಧ್ಯಾಹ್ನ 12:30 ಗಂಟೆಯ ನಂತರ ಎಸ್ಎಸ್ಎಲ್ಸಿ ಫಲಿತಾಂಶವನ್ನು https://karresults.nic.in ವೆಬ್ಸೈಟ್ನಲ್ಲಿ ನೋಡಬಹುದು.
ಇದನ್ನೂ ಓದಿ
- ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
- ಕುಮಟಾ ಸುತ್ತಮುತ್ತ ಅಕ್ರಮ ಮರಳು ದಂಧೆ : ಸೇತುವೆಗೂ ಅಪಾಯ ಸಾಧ್ಯತೆ
- ಬಾಲ್ಯದಿಂದಲ್ಲೆ ಗುಣಮಟ್ಟದ ಶಿಕ್ಷಣ ಅಗತ್ಯ : ಶಾಸಕ ದಿನಕರ ಶೆಟ್ಟಿ
- ಡಿಕೆ ಶಿವಕುಮಾರ ಅಧಿಕಾರ ಹಸ್ತಾಂತರಕ್ಕೆ ಸಿದ್ದು ಹಿಂದೇಟು ವಿಚಾರ : ಸಿದ್ದರಾಮಯ್ಯ ‘ಕುಮಾರಸ್ವಾಮಿ ಹಾದಿ’ ಹಿಡಿಯಲಿದ್ದಾರ.?
- ಪ್ರವಾಸೋದ್ಯಮ ಕಚೇರಿ ಮಂಚದ ವಿವಾದ: ದಾಖಲೆಯಿಂದ ಸತ್ಯ ಬಯಲು.!


