ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಚಾರಣಕ್ಕೆ ತೆರಳಿದ್ದ ಇಬ್ಬರೂ ಪ್ರವಾಸಿ ಯುವತಿಯರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಜಟಾಯು ತೀರ್ಥದ ಬಳಿ ನಡೆದಿದೆ.

ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಹೆಸರಿನ ಇಬ್ಬರು ಯುವತಿಯರು ಸಮುದ್ರಕ್ಕೆ ಬಿದ್ದು ಮೃತಪ್ಟವರಾಗಿದ್ದಾರೆ. ಇವರು ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ವಿದ್ಯಾರ್ಥಿಗಳಾಗಿದ್ದು, ಪರೀಕ್ಷೆ ಮುಗಿಸಿ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ. ಇಲ್ಲಿದೆ ಬಂದ ಇವರು 23 ಜನ ಸೇರಿ ಗೋಕರ್ಣದ ಜಟಾಯು ತೀರ್ಥದ ಬಳಿ ಚಾರಣಕ್ಕೆ ತೆರಳಿದ್ದಾರೆ‌.

ಈ ವೇಳೆ ಸಿಂದುಜಾ ಮತ್ತು ಕನ್ನಿಮೊಳಿ ಸೇರಿ ನಾಲ್ವರು ಯುವತಿಯರು ಸಮುದ್ರ ಅಂಚಿನ ಬಂಡೆ ಒಂದರ ಮೇಲೆ ಕುಳಿತಿದ್ದರು ಎನ್ನಲಾಗಿದ್ದು, ಈ ವೇಳೆ ಇಬ್ಬರು ಸಹ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಬಿದ್ದಿದ್ದು ಮೃತ ಪಟ್ಟಿದ್ದರೆ ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಆಸ್ಪತ್ರೆಯಲ್ಲಿ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಗೋಕರ್ಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ