ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯದ್ಯ ಕರಾವಳಿ ಸೇರಿದಂತೆ ನಾನಾ ಭಾಗದಲಲ್ಲಿ ಇಂದಿನ ಏಪ್ರಿಲ್ ,6ರ ತನಕ ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜ್ಯದ ಕರಾವಳಿ ಭಾಗದ ಕೆಲ ಕಡೆಯಲ್ಲಿ ಗುಡುಗು,ಗಾಳಿ ಸಹಿತ ಅಲ್ಲಲ್ಲಿ ಮಳೆ ಉಂಟಾಗುತ್ತಿದೆ. ಭಾರೀ ಗಾಳಿ ಸಹಿತ ಮಳೆ ಉಂಟಾಗಲಿರುವ ಕಾರಣ ವಿದ್ಯುತ್ ಕಂಬ,ಮರಗಳು ಅಕ್ಕ-ಪಕ್ಕದಲ್ಲಿ ಯಾವುದೆ ವಾಹನ ನಿಲುಗಡೆ ಅಥವಾ ಸಾರ್ವಜನಿಕರು ನಿಲ್ಲದಂತೆ ಸೂಚಿಸಲಾಗಿದೆ. ಉತ್ತರಕನ್ನಡ,ದಕ್ಷಿಣಕನ್ನಡ,ಹಾಗೂ ಉತ್ತರ ಒಳನಾಡಿನಲ್ಲಿಯೂ ಭಾರೀ ಮಳೆ ಸೂಚನೆ ನೀಡಲಾಗಿದೆ.
ಏಪ್ರಿಲ್ 03, ಏಪ್ರಿಲ್ 04, ಏಪ್ರಿಲ್ 05 ರಂದು ಕೆಲವು ಜಿಲ್ಲೆಗಳಿಗೆ ಯಲ್ಲೋ ಅರ್ಲಟ್ ಎಚ್ಚರಿಕೆ ನೀಡಲಾಗಿದೆ. ಹಾಸನ್, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮೂರು ದಿನಗಳ ಕಾಲ ಯಲ್ಲೋ ಅಲರ್ಟ್ ನೀಡಲಾಗಿದೆ.
ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೂಡ ಮಳೆ ಸುರಿಯಲಿದೆ. ಈ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ..
ಇದನ್ನೂ ಓದಿ
- Cyclone/ವಾಯುಭಾರ ಕುಸಿತ ; ಉತ್ತರ ಕನ್ನಡದಲ್ಲಿ ಭಾರೀ ಗಾಳಿ-ಮಳೆ ಸಾಧ್ಯತೆ
- ಮನೆ ಕಳೆದುಕೊಂಡ ರಾಘವೇಂದ್ರ ನಾಯ್ಕರಿಗೆ ಅನಂತಮೂರ್ತಿ ಹೆಗಡೆ ಧನ ಸಹಾಯ
- Darshan arrest/ಕೊನೆಗೂ ನಟ ದರ್ಶನ ಆರೆಸ್ಟ್ : ಹೊಸಕೆರೆಹಳ್ಳಿಯಲ್ಲಿ ಬಂಧನ
- ಬಟ್ಟೆ ತೊಳೆಯುವ ಸ್ಥಳದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ..!