ಸುದ್ದಿಬಿಂದು ಬ್ಯೂರೋ ವರದಿಲ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯ ಲೋಕೇಶ ಅರಿಷಿಣಗುಪ್ಪಿ ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಶ್ಲಾಘನೀಯ ಸೇವೆ ಹಾಗೂ ಸಮಾಜ ಸೇವೆಯ ಪರಿಗಣನೆಗಾಗಿ ಸೇವಾ ಕ್ಷೇತ್ರದ ಅಪೂರ್ವ ಸಾಧನೆಗಾಗಿ ಪ್ರತಿಷ್ಠಿತ “ಕರ್ನಾಟಕ ಸೇವಾ ರತ್ನ” ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಗೆ ಲೋಕೇಶ ಅರಿಷಿಣಗುಪ್ಪಿ ಅವರನ್ನು ಆಯ್ಕೆ ಮಾಡಲಾಗಿದೆ. ಜನಸಾಮಾನ್ಯರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ನಿರಂತರ ಶ್ರಮ, ಪ್ರಾಮಾಣಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳು ಈ ಗೌರವಕ್ಕೆ ಕಾರಣವಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 13ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಲೋಕೇಶ ಅರಿಷಿಣಗುಪ್ಪಿ ಅವರಿಗೆ “ಕರ್ನಾಟಕ ಸೇವಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು.‌ಲೋಕೇಶ  ಅವರಿಗೆ ಈ ಗೌರವ ದೊರೆತಿರುವುದು ಪೊಲೀಸ್ ಇಲಾಖೆಯ ಸೇವಾಭಾವನೆಗೆ ಮತ್ತಷ್ಟು ಗೌರವ ತಂದುಕೊಟ್ಟಿದೆ. ಪ್ರಶಸ್ತಿ ಸಿಕ್ಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ/ವಕೀಲ ಅಜಿತ್ ನಾಯಕ ಹತ್ಯೆ ಪ್ರಕರಣ ತೀರ್ಪು ಪ್ರಕಟ ಮೊದಲ ಆರೋಪಿ ದೋಷಿ