
ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀಬರ್ಡ್ ಬಸ್ ದುರಂತದಲ್ಲಿ ಉತ್ತರ ಕನ್ನಡ ಜಿಲ್ಲೆಯ ರಶ್ಮಿ ಮಹಾಲೆ ಅವರು ದುರಂತ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಸ್ ದುರಂತದ ಬಳಿಕ ಭಟ್ಕಳದ ರಶ್ಮಿ ಪತ್ತೆಯಾಗಿರಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇನ್ನೂ ಆಸ್ಪತ್ರೆಗೆ ಕೂಡ ದಾಖಲಿಸಿರುವ ಸುಳಿವು ಸಿಕ್ಕಿರಲಿಲ್ಲ. ಆದರೆ ಇದೀಗ ಶವ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಸಾವನ್ನಪ್ಪಿರುವ ನವ್ಯ ಹಾಗೂ ರಶ್ಮಿ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಆಗಾಗ ಚೈನ್ ಬದಲಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಇಬ್ಬರ ಶವದ ಪೈಕಿ ಓರ್ವಳ ಕುತ್ತಿಗೆಯಲ್ಲಿ ಚೈನ್ ಪತ್ತೆಯಾಗಿದೆ. ದೇಹ ಸಂಪೂರ್ಣ ಕರಕಲಾಗಿರುವುದರಿಂದ ಇಬ್ಬರಲ್ಲಿ ರಶ್ಮಿ ಹಾಗೂ ನವ್ಯ ಯಾರು ಎನ್ನುವುದೇ ಪತ್ತೆ ಹಚ್ಚುವುದು ಸದ್ಯ ಕುಟುಂಬಸ್ಥರಿಗೂ ಕಷ್ಟವಾಗಿದೆ ಎನ್ನಲಾಗಿದೆ.
ಈಗಾಗಲೇ ನವ್ಯ ಹಾಗೂ ಭಟ್ಕಳದ ರಶ್ಮಿ ಕುಟುಂಬಸ್ಥರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಶ್ಮಿ ಅವರು ಬೆಂಗಳೂರಿನ ಡೆಲಾಯ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ರಶ್ಮಿ ಮಹಾಲೆ ಅವರು ಕ್ರಿಸ್‌ಮಸ್ ರಜೆ ಹಿನ್ನಲೆಯಲ್ಲಿ ಗೆಳತಿಯರ ಜೊತೆ ಮುರುಡೇಶ್ವರ, ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಆದರೆ ಚಿತ್ರದುರ್ಗದಲ್ಲಿ ನಡೆದ ಘನಘೋರ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಇದನ್ನೂ ಓದಿ/ ಸೀಬರ್ಡ್ ಬಸ್ ದುರಂತ:ಕುಮಟಾದ ವಿಜಯ್ ಭಂಡಾರಿ ಸೇಫ್, ಮೇಘರಾಜ್ ಸುಳಿವಿಲ್ಲ


