
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರವಿಂದ್ರನಾಥ ಠಾಗೋರ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಸೋಮವಾರ ನಡೆದ ಕರಾವಳಿ ಉತ್ಸವದ ಉದ್ಘಟನಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಡೆದ ಸಾಂಸ್ಕತಿಕ ಮನರಂಜನಾ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ನಡೆದ ಜಾನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದವು.
ಶ್ರೀನಿವಾಸ ಮೊಳಕಾಲ್ಮುರ್ ಅವರಿಂದ ಕೊಂಬು ಕಹಳೆ ಪ್ರದರ್ಶನ, ನಾಗೇಶ ತಂಡದಿಂದ ಕೋಳಿ ಕುಣಿತ, ಗೋರವ ಕಲೆ ಪ್ರದರ್ಶನ ಹುಬ್ಬಳ್ಳಿಯ ಶಂಕ್ರಪ್ಪ ಅವರ ತಂಡದಿಂದ ಜಗ್ಗಲಿಗೆ ಮೇಳ ಪ್ರದರ್ಶನ, ಚಿತ್ರದುರ್ಗದ ಮಹಾಂತೇಶ ತಂಡದಿಂದ ಮುಖವಾಡ ಕುಣಿತ, ರಾಯಚೂರಿನ ಮಹಾಲಕ್ಷ್ಮಿ ತಂಡದವರಿಂದ ಸುಗಮ ಸಂಗೀತ, ಶಿರಸಿಯ ಸೀಮಾ ಭಾಗ್ವತ್ ತಂಡದಿಂದ ಭರತ ನಾಟ್ಯ ಪ್ರದರ್ಶನ ಕಾಯ್ರಕಮ ನಡೆಯಿತು.


