ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂದ್ಲೆಯಲ್ಲಿರುವ ಶ್ರೀ ಜಗದೀಶ್ವರಿ ದೇವಿ ಸನ್ನಿಧಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಲಿದ್ದಾರೆ.

ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಗೋಕರ್ಣಕ್ಕೆ ಆಗಮಿಸುವ ಅವರು, ಅಲ್ಲಿಂದ ನೇರವಾಗಿ ಅಂದ್ಲೆಯ ದೇವಾಲಯಕ್ಕೆ ತೆರಳಿ ಅರ್ಚಕ ಗಣಪತಿ ಅವರ ಮಾರ್ಗದರ್ಶನದಲ್ಲಿ ಏಕಾಂತವಾಗಿ ಪೂಜಾಕಾರ್ಯ ನೆರವೇರಿಸಲಿದ್ದಾರೆ. ಪೂಜೆಯ ವೇಳೆ ಪ್ರಸಾದ ರೂಪದಲ್ಲಿ ಫಲ ಕೇಳುವ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಲಿದ್ದು,ಈ ಅವಧಿಯಲ್ಲಿ ಬೆಂಬಲಿಗರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ.

ಹರಕೆ ಸಿದ್ಧಿ ಹಾಗೂ ಪ್ರಶ್ನಾ ಫಲಕ್ಕೆ ಪ್ರಸಿದ್ಧಿ ಪಡೆದಿರುವ ಈ ದೇವಾಲಯಕ್ಕೆ ಡಿ.ಕೆ.ಶಿವಕುಮಾರ್ ಅವರು ಇದಕ್ಕೂ ಮುನ್ನ 2019ರಲ್ಲಿ ಭೇಟಿ ನೀಡಿದ್ದರು. ಆ ವೇಳೆ ತಮ್ಮ ಮನದಾಳದ ಇಚ್ಛೆ ನೆರವೇರಲಿ ಎಂಬ ಸಂಕಲ್ಪದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಏಕಾಂತ ಪೂಜೆಯಲ್ಲಿ ತೊಡಗಿಕೊಂಡಿದ್ದರು.

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ಇದೇ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ/ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ