ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ: ನಾನು ಕಾಂಗ್ರೆಸ್‌ಗೆ ಹೋಗುವುದಾದರೆ, ಹೇಳಿ ಹೋಗುತ್ತೇನೆ, ಕದ್ದು ಹೋಗುವುದಿಲ್ಲ ಎಂದು ಶಾಸಕ ಶಿವರಾಮ್ ಹೆಬ್ಬಾರ್ (MLA Shivaram Hebbar) ನೇರವಾಗಿ ಪ್ರತಿಕ್ರಿಯಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ವದಂತಿಗಳ ಮಧ್ಯೆ, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರು ಬೆಳಗಾವಿಯಲ್ಲಿ ಮಾಧ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದು, ನಾನು ಕಾಂಗ್ರೆಸ್‌ಗೆ ಹೋಗುವುದಾದರೆ, ಹೇಳಿ ಹೋಗುತ್ತೇನೆ, ಕದ್ದು ಹೋಗುವುದಿಲ್ಲಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿದೆ. ಎಲ್ಲಾ ಕಾರ್ಖಾನೆಗಳ (Sugar Factories) ಮಾಲೀಕರು ಮುಖ್ಯಮಂತ್ರಿಗಳ (CM) ಸೂಚನೆಯನ್ನು ಪಾಲಿಸಿದ್ದಾರೆ.
ಹಾವೇರಿಯಲ್ಲಿ ನನ್ನದೇ ಫ್ಯಾಕ್ಟರಿ ಇದೆ, ಅಲ್ಲಿಯೂ ಕೂಡ ಸಮಸ್ಯೆ ಬಗೆಹರಿದಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ/ಕುಮಟಾ-ಶಿರಸಿ ಹೆದ್ದಾರಿ ಕಾಮಗಾರಿ ವಿಳಂಬ : ಹೆದ್ದಾರಿ ತಡೆದು ಪ್ರತಿಭಟನೆ


